ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಂತರ ಅಕ್ಷರಶಹ ಎಲ್ಲಾ ವರ್ಗವು ಕೂಡ ತತ್ತರಿಸಿ ಹೋಗಿದ್ದವು ಅದರಲ್ಲಿ ಒಂದು ಪ್ರಮುಖವಾದದ್ದು KSRTC, ಸಾರಿಗೆ ಇಲಾಖೆ ಕೋವಿಡ್ ಬಳಿಕ ಅಕ್ಷರಶಹ ನನಗೆ ಹೋಗಿತ್ತು. ಸಿಬ್ಬಂದಿಗಳಿಗೆ ತಿಂಗಳುಗಟ್ಟಲೆ ಸಂಬಳ ನೀಡಿದೆ ಇರೋದನ್ನ ನೋಡಿದ್ದೇವೆ. ಆದರೆ ಇದೆಲ್ಲ ಆದ ಬಳಿಕ ಶಕ್ತಿ ಯೋಜನೆ ಜಾರಿ ಬಂದಾಗಿನಿಂದ ಸಾರಿಗೆ ಇಲಾಖೆ ಕೊಂಚ ಸುಧಾರಿಸಿದೆ ಅನ್ನುವಷ್ಟರಲ್ಲಿ ಇದೀಗ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ.
ಸಾರಿಗೆ ನಿಗಮ ಖಾಸಗೀಕರಣದತ್ತ ಮುಖ ಮಾಡಿದ್ದು, KSRTC ಸಾಮಾನ್ಯ ಬಸ್ ಗಳಿಗೆ ಖಾಸಗಿ ಡ್ರೈವರ್ ಬರಲಿದ್ದಾರೆ. ನಿತ್ಯ ಲಕ್ಷಾಂತರ ಮಂದಿ ಈ ನಿಗಮವನ್ನ ನಂಬಿಕೊಂಡು ಮನೆಯಿಂದ ಹೊರಗಡೆ ಬರ್ತಾರೆ. ಆದರೆ ಇಂತಹ ಸಂಸ್ಥೆಯೊಳಗೆ ಖಾಸಗಿ ಭೂತ ಎಂಟ್ರಿಯಾಗೋಕೆ ಶುರುವಾಗ್ತಿದೆ. ಸಾರಿಗೆ ನಿಗಮ ಖಾಸಗೀಕರಣ ದತ್ತ ಹೆಜ್ಜೆ ಹಾಕುತ್ತಿದೆಯಾ ಎಂಬ ಪ್ರಶ್ನೆ ಮೂಡಿದ್ದು. ಈಗಾಗಲೇ ಎಲೆಕ್ಟ್ರಿಕ್ ಬಸ್ ಗಳಿಗೆ ಖಾಸಗಿ ಡ್ರೈವರ್ ನೇಮಕ ಮಾಡಿರೋ ನಿಗಮ ಇದೀಗ ಸಾಮಾನ್ಯ ಬಸ್ಗಳಿಗೂ ಖಾಸಗಿ ಡ್ರೈವರ್ಗಳನ್ನ ನೇಮಿಸ್ತಿದೆ. ಬರೋಬ್ಬರಿ 2 ಸಾವಿರ ಬಸ್ಗಳಿಗೆ ಔಟ್ ಸೋರ್ಸ್ ಏಜೆನ್ಸಿ ಯಿಂದ ಚಾಲಕರನ್ನ ನೇಮಕ ಮಾಡಿಕೊಳ್ಳುತ್ತಿದ್ದು ಈಗಾಗಲೇ ಟೆಂಡರ್ ಕರೆಯಲಾಗಿದೆ.
ಔಟ್ ಸೋರ್ಸ್ ಮೂಲಕ ಚಾಲಕರು ನೇಮಕವಾದರೆ ಖಾಸಗಿ ಚಾಲಕರು ಕೆಎಸ್‌ಆರ್ಟಿಸಿಗೆ ಪ್ರವೇಶ ಪಡೆಯಲಿದ್ದಾರೆ. ಕೋವಿಡ್ 19 ನಂತರ ಯಾವುದೇ ಹೊಸ ನೇಮಕಾತಿ ಮಾಡಿಕೊಂಡಿಲ್ಲ. ಹೀಗಾಗಿ ಚಾಲಕರ ಕೊರತೆ ಹಿನ್ನೆಲೆ ಖಾಸಗಿ ಏಜೆನ್ಸಿ ಮೂಲಕ ಡ್ರೈವರ್ ಗಳ ನೇಮಕಕ್ಕೆ ಮುಂದಾಗಿದೆ.
ಆದರೆ ನಿಗಮದ ಅಧಿಕಾರಿಗಳ ಈ ನಿರ್ಧಾರ ವಿರೋಧಕ್ಕೆ ಕಾರಣವಾಗಿದೆ. ಔಟ್ ಸೋರ್ಸ್ ಸಿಬ್ಬಂದಿ ನೇಮಕದಿಂದ ಕಾಯಂ ಸಿಬ್ಬಂದಿ ಗೆ ಆಪತ್ತು ಕಾದಿದೆ. ಸರ್ಕಾರ ನಿಧಾನವಾಗಿ ನಿಗಮದೊಳಗೆ ಖಾಸಗೀಕರಣ ಮಾಡಲು ಸಂಚು ಹೂಡಿದ್ಯಾ ಅನ್ನೋ ಅನುಮಾನ ಶುರುವಾಗಿದೆ.