ಬೆಂಗಳೂರು : ಗಂಧದನಾಡು ಚಂದದ ಬೀಡು ಎಂದು ಹೆಸರಾಗಿರುವ ಕರುನಾಡಿನಲ್ಲಿ ಶ್ರೀಗಂಧದ ಕಂಪನ್ನು ಹೆಚ್ಚಿಸಲು ಜಯಕರ್ನಾಟಕ ಜನಪರ ವೇದಿಕೆ ಮುಂದಾಗಿದೆ.

ಗಾಂಧಿಜಯಂತಿ ಮತ್ತು ಸ್ವಚ್ಚತಾ ದಿನದ ಅಂಗವಾಗಿ ರಾಜ್ಯಾದ್ಯಂತ ಪ್ರತಿ ಪೊಲೀಸ್ ಠಾಣೆ ಆವರಣದಲ್ಲಿ ಎರಡು ಶ್ರೀಗಂಧದ ಗಿಡಗಳನ್ನು ನೆಡುವ ಮೂಲಕ ಸಂಘಟನೆಯ 3ನೇ ವರ್ಷದ ವಾರ್ಷಿಕೋತ್ಸವವನ್ನ ಅರ್ಥಪೂರ್ಣವಾಗಿ ಆಚರಿಸಿದೆ.

ಜಯಕರ್ನಾಟಕ ಜನಪರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಮಾರ್ಗದರ್ಶನದಲ್ಲಿ ನಗರದ ಸಂಪಿಗೆ ಹಳ್ಳಿ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ರಾಜ್ಯಾಂದ್ಯಂತ ಪೊಲೀಸ್ ಠಾಣೆ ಮತ್ತು ಸರ್ಕಾರಿ ಕಚೇರಿ ಆವರಣದಲ್ಲಿ ಶ್ರೀಗಂಧದ ಸಸಿ ನೆಡಲಾಯಿತು. ಇನ್ನು ಕಾರ್ಯಕ್ರಮಕ್ಕೆ ಸಂಪಿಗೆಹಳ್ಲಿ ಇನ್ಸ್ ಪೆಕ್ಟರ್ ಶಿವಕುಮಾರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಸಾಥ್ ನೀಡಿದ್ರು.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್