ಕೋಲಾರ: ಜಿಲ್ಲೆಯಲ್ಲಿ ಈಗಾಗಲೇ ಸುಮಾರು 15 ದಿನಗಳಲ್ಲಿ ಮೂರು ಕೊಲೆಗಳು ನಡೆದಿದೆ. ಕಾಂಗ್ರೆಸ್ ಮುಖಂಡ , ಮಾಜಿ ಸಭಾಪತಿ ರಮೇಶ್ ಕುಮಾರ್ ಅವರ ಆಪ್ತ ಎಂ. ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್ ಮತ್ತು ನವೆಂಬರ್ 03 ರಂದು ಬಾಲಕ ಕಾರ್ತಿಕ್ ಸಿಂಗ್ ಎಂಬುವರನ್ನು ಕೊಲೆ ಮಾಡಲಾಗಿತ್ತು.
ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ ಹಾಗೂ ಮಾಹಿತಿ ಕಲೆಹಾಕುವಲ್ಲಿ ವಿಫಲ ಹಿನ್ನೆಲೆಯಲ್ಲಿ ಎಎಸ್ಐ ಮುನಿರಾಜು, ಕಾನ್ಸ್ಟೇಬಲ್ಗಳಾದ ವಿಷ್ಣು, ಶಿವ ಅವರನ್ನು ಅಮಾನತು ಮಾಡಿ ಕೋಲಾರ ಎಸ್ಪಿ ನಾರಾಯಣ್ ಆದೇಶ ಹೊರಡಿಸಿದ್ದಾರೆ.