ಬೆಂಗಳೂರು : ನಿನ್ನೇಯ ಶಾಸಕಾಂಗ ಪಕ್ಷದ ಸಭೆ ನಮಗೆ ಸಮಾಧಾನ ತಂದಿದೆ ಎಂದು ಶೃಂಗೇರಿ ಕ್ಷೆತ್ರದ ಶಾಸಕರಾದ ಟಿ .ಡಿ ರಾಜೇಗೌಡ ಹೇಳಿದರು. ಈ ಬಗ್ಗೆ ಬೆಂಗಳೂರಿನ ಸಿಎಂ ನಿವಾಸದ ಬಳಿ ಮಾತನಾಡಿ ನಮ್ಮದು ಚಿಕ್ಕಮಗಳೂರು ಜಿಲ್ಲೆ, ಶೃಂಗೇರಿ ವಿಧಾನಸಭಾ ಕ್ಷೇತ್ರ. ಬಹಳಷ್ಟು ಮಳೆಯಾಗಿ ಭೂಕುಸಿತ, ಸೇತುವೆಗಳು ಕುಸಿದು ಹೋಗಿವೆ.ಮಳೆಯಿಂದಾಗಿ ಸಾಕಷ್ಟು ಅನೇಕ ಹಾನಿಯಾಗಿದೆ.
ಮೊನ್ನೆ ಸಿಎಂ ಸೂಚನೆ ಕೊಟ್ಟು ಜಾರ್ಜ್ ಅವರನ್ನ ಕಳುಹಿಸಿಕೊಟ್ರು.ಜಾರ್ಜ್ ಅವರು ಸಂಪೂರ್ಣ ವೀಕ್ಷಣೆ ಮಾಡಿ ಬಂದಿದ್ದಾರೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು.ಅದರ ಬಗ್ಗೆ ಚರ್ಚೆ ಮಾಡಲು ಬಂದಿದ್ದೆ. ಅನುದಾನ ಬಿಡುಗಡೆ ಬಗ್ಗೆ ಚರ್ಚೆ ಮಾಡಲು ಸಿಎಂ ಭೇಟಿಯಾಗಿದ್ದೆ ಎಂದು ಹೇಳಿದ್ರು. ಇನ್ನೂ ಶಾಸಕಾಂಗ ಪಕ್ಷದ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ ನಿನ್ನೆ ಅಭಿವೃದ್ಧಿ ಕೆಲಸ ಮತ್ತು ವರ್ಗಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಬೇರೆ ಯಾವುದೇ ಚರ್ಚೆ ಶಾಸಕರು ಆಗಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ.ನಿನ್ನೆ ಸಭೆ ಸಮಾಧಾನ ತಂದಿದೆ ಉತ್ತಮವಾದ ಸಭೆ ಆಗಿದೆ.ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಆಯಿತು.ನಮ್ಮಲ್ಲಿ ಯಾವುದೇ ಗೊಂದಲ ವಿಲ್ಲ. ಐದು ವರ್ಷಗಳ ಕಾಲ ಸಿಎಂ ಸಿದ್ದರಾಮಯ್ಯ,ಡಿಕೆಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರ ಮುನ್ನಡೆಯುತ್ತದೆ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ