ಬೆಂಗಳೂರು: ಬೆಂಗಳೂರಿನಲ್ಲಿ ಕುಖ್ಯಾತ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ @ ಎಸ್ಕೇಪ್ ಕಾರ್ತಿಕ್ ಅರೆಸ್ಟ್ ಮಾಡಲಾಗಿದೆ.
ಗೋವಿಂದರಾಜನಗರ ಪೊಲೀಸರಿಂದ ಆರೋಪಿ ಬಂಧಿಸಿದ್ದಾರೆ. 100 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿತನಾಗಿದ್ದ ಕಾರ್ತಿಕ್ ಪರಾರಿಯಾಗಿದ್ದಾರೆ. ಕಳೆದ ವರ್ಷ ನವಂಬರ್ ನಲ್ಲಿ ಹೆಣ್ಣೂರು ಪೊಲೀಸರು ಕಾರ್ತೀಕ್ ನನ್ನ ಬಂಧಿಸಿದ್ದರು. ಹೆಣ್ಣೂರು,ಗೋವಿಂದ ರಾಜನಗರ,ಕೊತ್ತನೂರು ಸೇರಿ ಹಲವು ಕಡೆ ಕೃತ್ಯ ನಡೆಸಿದ್ದಾರೆ.
ಕಳವು ಮಾಡಿದ ಚಿನ್ನಾಭರಣಗಳ ಅಡವಿಟ್ಟು ವಿಲಾಸಿ ಜೀವನ.ಗೋವಾ ಕ್ಯಾಸಿನೋದಲ್ಲಿ ಮೋಜು ಮಸ್ತಿ ಅಸಾಮಿ ಮಾಡುತ್ತಿದ್ದಾರೆ. ಪ್ರಕರಣ ಸಂಬಂಧ ಗೋವಾಗೆ ತೆರಳಿದ್ದ ವೇಳೆ ಪೊಲೀಸರಿಗೆ ಲಾಕ್ ಆಗಿದ್ದಾನೆ. ಲಾಕ್ ಆದ ಖತರ್ನಾಕ್ ಕಳ್ಳ ಕಾರ್ತಿಕ್ @ ಎಸ್ಕೇಪ್ ಕಾರ್ತಿಕ್ ತೀವ್ರ ವಿಚಾರಣೆ ನಡೆಸಿದ್ದಾರೆ.