ಬೆಂಗಳೂರು: ಲೋಕಸಭಾ ಚುನಾವಣೆಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಚರ್ಚೆ ಮಾಡಲು ಇಂದು ಸಭೆ ಕರೆದಿದ್ದೇವೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಇಂದು ಅಲ್ಪಸಂಖ್ಯಾತರ ಸಭೆ ಕರೆದಿದ್ದೇವೆ.
ವಿಶೇಷವಾಗಿ ಲೋಕಸಭಾ ಚುನಾವಣೆ ಗೆಲ್ಲುವ ಬಗ್ಗೆ ಚರ್ಚೆ ಮಾಡುತ್ತೇವೆ. ಎರಡನೆಯದು ಕಾರ್ಪೊರೇಷನ್ ಚುನಾವಣೆ ಬರ್ತಿದೆ. ಚುನಾವಣೆಯಲ್ಲಿ ನಮ್ಮ ಪಾತ್ರದ ಬಗ್ಗೆ ಚರ್ಚೆ ಮಾಡ್ತೀವಿ. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಬೇಕು ಅಂತ ಗುರಿ ಇದೆ. ಈಗಾಗಲೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಯಾವ ರೀತಿ ಪಕ್ಷ ಸಂಘಟನೆ ಮಾಡಬೇಕು ಅಂತ ನಿರ್ಧಾರ ಆಗಿದೆ. 20 ಸ್ಥಾನ ಗೆಲ್ಲುವ ಗುರಿ ಇದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿದ ರೀತಿ, ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸ್ತಾರೆ. ಬಿಜೆಪಿ ಮತ್ತೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ.
ಯಾವ ಮಹಾ ಘನಕಾರ್ಯ ಮಾಡಿದ್ದೀರಾ ಅಂತ ನಿಮಗೆ ಮತ ಹಾಕ್ತಾರೆ. ನಾವು ಬಂದ ಎರಡು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತಂದಿದ್ದೇವೆ. ಮುಂದಿನ ಆರು ತಿಂಗಳು ಮನೆ ಮನೆಗೆ ತಲುಪುತ್ತೇವೆ. ಬಿಜೆಪಿ ಬರೀ ಸುಳ್ಳು ಹೇಳ್ತಿದೆ. ಸುಳ್ಳು ಹೇಳೋದ್ರಲ್ಲಿ ಪ್ರಧಾನಿ ಮೋದಿ ಅವರಿಗೆ ಆಸ್ಕರ್ ಅವಾರ್ಡ್ ಕೊಡಬಹುದು.15ಲಕ್ಷ ಹಣ ಪ್ರತಿಯೊಬ್ಬರ ಅಕೌಂಟಿಗೆ ಕೊಡ್ತೀವಿ ಅಂದ್ರು ಕೊಡಲಿಲ್ಲ. ನಮ್ಮ ಸರ್ಕಾರ ಬಂದ್ರೆ ರೈತರಿಗೆ ಡಬಲ್ ಹಣ ಮಾಡ್ತೀವಿ ಅಂದ್ರು ಏನೂ ಮಾಡಲಿಲ್ಲ. ಸ್ವರ್ಗ ತೋರಿಸ್ತೀವಿ ಅಂತ ಹೇಳಿ, ಬೆಲೆ ಏರಿಕೆ ಮಾಡಿ ನರಕ ತೋರಿಸಿದ್ರು. ದೇಶದ ಜನ ಬದಲಾವಣೆ ಬಯಸಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿ ಆಗ್ತಾರೆ ಅಂತ ವಿಶ್ವಾಸ ಇದೆ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ