ಬೆಂಗಳೂರು: ಇನ್ನೇನು ದೀಪಾವಳಿ ಹತ್ರ ಬರುತ್ತಿದೆ. ಈಗಾಗಲೇ ರಾಜ್ಯದ ಜನರು ಹಬ್ಬವನ್ನು ಆಚರಿಸಲು ಭರದ ಸಿದ್ಧತೆ ನಡೆಸಿದ್ದಾರೆ.
ಈ ನಡುವೆಯೇ ದೀಪಾವಳಿ ಹಬ್ಬಕ್ಕೆ ಮುಂಚಿತಾವಾಗಿ ಮಿಂಟೋ ಆಸ್ಪತ್ರೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ದೀಪಾವಳಿ ಪಟಾಕಿ ದುರಂತದಿಂದ ಗಾಯಳುಗಳಿಗೆ ಚಿಕಿತ್ಸೆ ಕೊಡಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿಕೊಳ್ಳಲು ಮಿಂಟೋ ಮುಂದಾಗಿದ್ದಾರೆ. ಎಂದಿಗಿಂತಾ ಈ ವರ್ಷ ಹೆಚ್ಚು ಬೆಡ್ ವ್ಯವಸ್ಥೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.
ದೀಪಾವಳಿ ಸಮಯದಲ್ಲಿ ವೈದ್ಯರ ಸೇವೆ ಸಮಯ ವಿಸ್ತರಿಸೋ ಸಾಧ್ಯತೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇಲ್ಲಿಯವರೆಗೆ ಪಟಾಕಿ ಅವಘಡಗಳು ಕಮ್ಮಿ ಆಗಿದೆ ಎಂದು ತಿಳಿದುಬಂದಿದೆ. ಆದ್ರೂ ಹೆಚ್ಚುವರಿ 45 ಬೆಡ್ ವ್ಯವಸ್ಥೆ ಮಾಡಲು ಸಿದ್ದತೆ ನಡೆಸಲಾಗಿದೆ. ದೀಪಾವಳಿ ಹಬ್ಬದ ಎರಡು ದಿನ ಮುಂಚಿತವಾಗಿ ಪಟಾಕಿ ಗಾಯಳು ಚಿಕಿತ್ಸಾ ಸೆಂಟರ್ ತೆರೆಯಲು ಸಿದ್ದತೆ ನಡೆಸಲಾಗಿದೆ.