ಬೆಂಗಳೂರು : ಕುಮಾರಸ್ವಾಮಿ ಅವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಏನಾದ್ರೂ ದಾಖಲೆಗಳಿದ್ದರೆ ಸರ್ಕಾರಕ್ಕೆ ಕೊಡಲಿ ಸರಿಪಡಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. ಕುಮಾರಸ್ವಾಮಿ ಆರೋಪ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಹೆಚ್‌ಡಿಕೆ ಈಗ ತಾನೆ ಪ್ರವಾಸ ಮುಗಿಸಿ ಬಂದಿದ್ದಾರೆ. ಪಾಪ ಅವರು ಸದನದಲ್ಲಿ ಪೆನ್ ಡ್ರೈವ್ ತೋರಿಸಿದ್ದರು. ಸದನಕ್ಕಿಂತ ದೊಡ್ಡ ವೇದಿಕೆ ಬೇರೊಂದಿಲ್ಲ. ಅಲ್ಲಿಯೇ ಅವರು ಏನೂ ಬಹಿರಂಗಪಡಿಸಲಿಲ್ಲ. ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಏನಾದ್ರೂ ದಾಖಲೆಗಳಿದ್ದರೆ ಸರ್ಕಾರಕ್ಕೆ ಕೊಡಲಿ ಪರಿಶೀಲನೆ ಮಾಡುತ್ತೇವೆ ನೈಸ್ ವಿಚಾರದ ಮೇಲೂ ನಾವು ಚರ್ಚೆ ಮಾಡ್ತೇವೆ ಎಂದು ಹೇಳಿದರು.
ನಾಮನಿರ್ದೇಶಿತ ಪರಿಷತ್ ಸ್ಥಾನಕ್ಕೆ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯಪಾಲರಿಗೆ ಹೆಸರೇ ಕಳುಹಿಸಿಲ್ಲ. ಇದೆಲ್ಲ ಕೇವಲ ಪತ್ರಿಕೆಗಳಲ್ಲಿ ಬಂದಿದ್ದನ್ನು ನೋಡಿದ್ದೇನೆ. ಮನ್ಸೂರ್ ಅಲಿ ಖಾನ್ ಆಗಲಿ ಬೇರೆಯವರ ಹೆಸರಾಗಲಿ ಇನ್ನೂ ಶಿಫಾರಸೇ ಆಗಿಲ್ಲ. ಅಲ್ಪ ಸಂಖ್ಯಾತ ಸಮುದಾಯಕ್ಕೆ ಅನ್ಯಾಯವೂ ಆಗುವುದಿಲ್ಲ. ಇವರಿಗೆ ಎಂಎಲ್ಸಿ ಸ್ಥಾನ ಕೊಡಿ ಅಂತ ನಾವು ಯಾರ ಹೆಸರನ್ನೂ ಹೇಳಿಲ್ಲ ಎಂದು ಹೇಳುವ ಮೂಲಕ ನಾಮನಿರ್ದೇಶಿತ ಪರಿಷತ್ ಸ್ಥಾನಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂಬ ವದಂತಿಗೆ ಸ್ಪಷ್ಟನೆ ನೀಡಿದರು.
ವರದಿ : ಬಸವರಾಜ ಹೂಗಾರ