State News

ವಿಕೇಂಡ್ ನಲ್ಲಿ ಪವರ್ ಕಟ್; ಮೂರು ದಿನ ನೋ ಕರೆಂಟ್

ಬೆಂಗಳೂರು : ಉದ್ಯಾನಗರಿಯ ಹಲವೆಡೆ ಮೂರು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಬೆಸ್ಕಾಂ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಗಳು ಕೆಲವು ನಿರ್ವಹಣಾ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸುತ್ತಿವೆ, ಹೀಗಾಗಿ ನಗರದಲ್ಲಿ ಕೆಲವು ಕಡೆ ವಿದ್ಯುತ್ ಸ್ಥಗಿತಗೊಳಿಸಲಾಗುತ್ತೆ. ಇನ್ನೂ ಮೂರು ದಿನ ಬೆಂಗಳೂರಿಗರು ವಿದ್ಯುತ್ ಸಮಸ್ಯೆ ಎದುರಿಸಲಿದ್ದಾರೆ.

ಇನ್ನು ಎಲ್ಲೆಲ್ಲಿ ಪವರ್ ಕಟ್ ಅಂತಾ ನೋಡೋದಾದ್ರೆ…

ಬುಕ್ಕಪಟ್ಟಣ, ಹೊಸಹಳ್ಳಿ, ಹುಣಸೆಕಟ್ಟೆ, ಯರದಕಟ್ಟೆ, ನೇರಲಗುಡ್ಡ, ರಾಮಲಿಂಗಪುರ, ಸಾಲಾಪುರ, ಬಾಳಾಪುರ, ಮಾದೇನಹಳ್ಳಿ, ರಂಗನಾಥಪುರ, ನಿಂಬೆಮರದಳ್ಳಿ, ಎಸ್ ರಂಗನಹಳ್ಳಿ, ಹುಯಿಲ್ದೊರೆ, ಕಂಬದಹಳ್ಳಿ, ಗಿಡ್ಡನಹಳ್ಳಿ, ಸಾಕ್ಷಿಕೋನಹಳ್ಳಿ, ತುಪ್ಪದಕೋಣ, ಕರೇಮಾದನಹಳ್ಳಿ, ಮಣ್ಣಮ್ಮ ದೇವಸ್ಥಾನ, ಮುರುಡೇಶ್ವರ ಸೆರಾಮಿಕ್ ಫ್ಯಾಕ್ಟರಿ, ಜಾನಕಲ್, ಕಿಲಾರದಹಳ್ಳಿ ಮತ್ತು ರಾಮನಹಳ್ಳಿ. ಯಲ್ಯುರು, ಗುಮ್ಮನಹಳ್ಳಿ, ಜುಂಜುರಾಮಣಹಳ್ಳಿ, ಎಮ್ಮರಹಾಲಿ, ಹೆಗಾನಹಲ್ಲಿ, ಎಡಿಗರಡಸರಹಾಲಿ, ಮುಡ್ಡೀಗೆರೆ, ಆಂಥಾಪುರ, ಮೆಕೆರಹಳ್ಳಿ, ಅಗರಾ, ಫಾರೆಸ್ಟ್ ಆಫೀಸ್, ಆರ್‌ಎಂಸಿ, ಕೃಷ್ಣ ನಗರ, ಕೆಎಸ್‌ಆರ್ಟಿಸಿ ಡಿಪೋ, ಬೈಪಾಸ್ ಪರ್ಟ್ರೋಲ್ ಬಂಕ್ , ಸರಸ್ವತಿ ಬಡವಣೆ, ನಾಗಜ್ಜಿ ಗುಡ್ಲು, ಗುಡ್ಡದಹಟ್ಟಿ, ಪಂಜಿಗನಹಳ್ಳಿ, ಲಕ್ಷ್ಮೀಸಾಗರ, ಜೋಗಿಹಳ್ಳಿ, ದೊಡ್ಡ ಆಲದಮರ, ಸೀಬು ಅಗ್ರಹಾರ, ನಾಗೇನಹಳ್ಳಿ, ದೊಡ್ಡಸೀಬಿ, ಕಲ್ಲಶೆಟ್ಟಿಹಳ್ಳಿ, ಯಲದಬಾಗಿ, ಹಾವಿನಹಾಳು, ತರೂರು ರಸ್ತೆ, ಗೊಲ್ಲರಹಟ್ಟಿ, ಚಿವಣ್ಣನಹಟ್ಟಿ, ಗೊಲ್ಲರಹಟ್ಟಿ ಹೆಚ್ ಪಾಳ್ಯ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ಸೇರಿದಂತೆ ಹಲವೆಡೆ ಪವರ್ ಕಟ್ ಇರಲಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!