ಮೈಸೂರು : ಮೈಸೂರಿನ ಅರಮನೆಯಲ್ಲಿ ನಾಳೆಯಿಂದ ಜಿ-20 ಶೃಂಗಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಾಳೆಯಿಂದ 2 ದಿನಗಳ ಕಾಲ ಅರಮನೆಗೆ ಪ್ರವೇಶವಿಲ್ಲ ಎಂದು ಅರಮನೆ ಆಡಳಿತ ಮಂಡಳಿ ಆದೇಶ ಹೊರಡಿಸಲಾಗಿದೆ.
ಜಿ 20 ಶೃಂಗಸಭೆ ವಿದೇಶಿ ಗಣ್ಯರು ಅರಮನೆಗೆ ಭೇಟಿ ನೀಡಲಿದ್ದಾರೆ. ಮುಂಜಾಗೃತಾ ಕ್ರಮವಾಗಿ ಅರಮನೆಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಆಗಸ್ಟ್ 1ರ ಮಧ್ಯಾಹ್ನ 2:30ರಿಂದ ಮೈಸೂರು ಅರಮನೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಅಲ್ಲದೇ ಆಗಸ್ಟ್ 2ರಂದು ರಾತ್ರಿ 7ರಿಂದ 8 ಗಂಟೆಯವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ವೀಕ್ಷಣೆಗೂ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ