ಬೆಂಗಳೂರು : ವಿಶೇಷ ಚೇತನ ಮಕ್ಕಳು ಅಂದ್ರೆ ಈಗಿನ ಸೊಸೈಟಿಯಲ್ಲಿ ಎಕೆಪ್ಟ್ ಮಾಡೀಕೊಳ್ಳುದು ಕಡಿಮೆ. ಅಂತಹ ಮಕ್ಕಳೊಂದಿಗೆ ಉದ್ಯಾನನಗರಿಯ ಕಬ್ಬನ್ ಪಾರ್ಕ್ ಬಾಲಭವನದಲ್ಲಿ ಇಡೀ ದಿನ ಕಳೆದು.. ಅವರೊಟ್ಟಿಗೆ ಆಟವಾಡಿ, ಪರಿಸರ ವಾತಾವರಣದಲ್ಲಿ ಅವರನ್ನು ಬೆರೆಯುವಂತೆ ಮಾಡಿ, ತಮ್ಮಲ್ಲೂ ವಿಶೇಷ ಅಭಿರುಚಿ ಇದೆ ಅಂತಾ ತೋರಿಸಿಕೊಟ್ರು. ಅಭ್ಯಾಸದ ಜೊತೆಗೆ ಆಟವಾಡಿ ಖುಷಿ ಪಟ್ರು.
ನಾವು ಎಲ್ಲರಂತೆ ಆಡಿ ನಲಿಯಬೇಕು ಅನ್ನೋದು ಆ ಮಕ್ಕಳ ಆಸೆ. ಆದ್ರೆ ಅಂಗವೈಕಲ್ಯದಿಂದ ತಮ್ಮ ಆಸೆಗಳನ್ನ ಪೂರೈಸಿಕೊಳ್ಳಲಾಗದೇ ಕೊರಗುತ್ತಿರೋ ಮಕ್ಕಳಿಗೆ ವಿನಾಯಕ ಎಜುಕೇಷನ್ ಟ್ರಸ್ಟ್ ಜೊತೆಯಾಗಿ ನಿಂತಿದೆ. ಚಂದ್ರ ಲೇಔಟ್ ನಲ್ಲಿ ಸ್ಕೂಲ್ ಹೊಂದಿರೋ ಈ ಟ್ರಸ್ಟ್, ವಿಶೇಷ ಚೇತನ ಮಕ್ಕಳಿಗೂ ಎಲ್ಲರಂತೆ ಆಡಿ ನಲಿಯುವ ಅವಕಾಶ ನೀಡಲು ಶ್ರಮಿಸಿದೆ. ಇಂದು ವಿಶೇಷಚೇತನ ಮಕ್ಕಳನ್ನ ಎಲ್ಲರಂತೆ ಆಡಿ ಕುಣಿಯಲು ಕರೆತಂದ ಈ ಸಂಸ್ಥೆ ಅವರ ಜೊತೆಗೂಡಿ ಆಡಿ ಸಂಭ್ರಮಿಸಿದ್ರು. ದೇವರ ಮಕ್ಕಳಿಗೆ ಪ್ರೀತಿ ಹಂಚುವ ಜೊತೆಗೆ ಅವರು ಎಲ್ಲರಂತೆ ಬದುಕಬೇಕು ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ರು.
ಅದೇನೇ ಇರಲಿ ವಿಶೇಷ ಮಕ್ಕಳು ಅಂದ್ರೆ ನಮ್ಮ ಸಮಾಜ ಹೇಗೆಲ್ಲಾ ಕಾಣುತ್ತೆ ಅಂತ ಗೊತ್ತೇ ಇದೆ. ಅದನ್ನೆಲ್ಲ ಪಕ್ಕಕ್ಕೆ ತಳ್ಳಿ ಆ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿರುವ ಈ ಟ್ರಸ್ಟ್ ಹಾಗೂ ಶಿಕ್ಷಕಿಯರಿಗೆ ಒಂದು ಸಲಾಂ ಹೇಳಲೇಬೇಕು.
ಹರ್ಷಿತಾ ಪಾಟೀಲ