ಮಡಿಕೇರಿ : ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಜನವರಿ 22 ರಂದು ಉದ್ಘಾಟನೆಯಾಗಲಿದೆ. ಅಂದೇ ರಾಮಲಲ್ಲಾ (ಬಾಲ ರಾಮನ) ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಈ ರಾಮಮಂದಿರಕ್ಕೆ ದೇಶದ ವಿವಿಧ ಪವಿತ್ರ ನದಿಗಳ ನೀರು ರವಾನೆಯಾಗುತ್ತಿದೆ. ಅದರಂತೆ ದಕ್ಷಿಣ ಮಂದಾಕಿನಿ ಕಾವೇರಿ ನದಿಯಿಂದಲೂ ತೀರ್ಥ ರವಾನೆ ಮಾಡಲಾಗಿದೆ. ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮಕುಂಡಿಕೆಯಿಂದ ಅಖಿಲ ಭಾರತೀಯ ಸಂತ ಸಮಿತಿ, ವಿಶ್ವ ಹಿಂದೂ ಪರಿಷತ್ ಸದಸ್ಯರು ತೀರ್ಥ ಸಂಗ್ರಹಿಸಿದರು. ಈ ವೇಳೆ ಕಾವೇರಿ ಮಾತೆ ನಾಮ ಜಪ ಮಾಡಲಾಯಿತು ಮತ್ತು ವಿಶೇಷ ಪೂಜೆ ನಡೆಸಿದವು.