ಬೆಂಗಳೂರು : ನಾಳೆ ಕೃಮಾರಕೃಪ ರಸ್ತೆಯಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ 21ನೇ ಚಿತ್ರಸಂತೆ ನಡೆಯಲಿದೆ.
ಚಿತ್ರಸಂತೆಯನ್ನ ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕುರು ಆಗಮಿಸುವ ಸಾಧ್ಯತೆ ಇರುವ ಹಿನ್ನೆಲೆ ಚಿತ್ರಸಂತೆ ಕಾರ್ಯಕ್ರಮಕ್ಕೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿಯಿಂದ ಮೆಟ್ರೋ ಫೀಡರ್ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ವಿಶೇಷ ಮೆಟ್ರೋ ಫೀಡರ್ ಬಸ್ ಸೇವೆ ನೀಡಲಿದ್ದು, ಟಿಕೆಟ್ ದರ ರೂ.15.00 ವಿಶೇಷ ದರಗಳೊಂದಿಗೆ ಮೆಟ್ರೋ ಫೀಡರ್ ಬಸ್ ಕಾರ್ಯಚರಣೆ ನಡೆಸಲಿವೆ.
ಕೆಂಪೇಗೌಡ ಬಸ್ ನಿಲ್ದಾಣ-ವಿಧಾನಸೌಧ-ಆನಂದರಾವ್ ಸರ್ಕಲ್-ಶಿವಾನಂದ ಸ್ಟೋರ್ಸ. 4 ಬಸ್ ಕಾರ್ಯಚರಣೆಗೊಳ್ಳಲಿದ್ದು, ಪ್ರತಿ 10 ನಿಮಿಷಕ್ಕೊಂದರಂತೆ ಸಂಚರಿಸಲಿವ.
ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ-ವಿಧಾನಸೌಧ ಸೆಂಟ್ರಲ್ ಟಾಕೀಸ್, ಲಿಂಕ್ ರಸ್ತೆ, ಶಿವಾನಂದ ಸ್ಟೋರ್ಸ್ 4 ಬಿಎಂಟಿಸಿ ಬಸ್ ಗಳ ಕಾರ್ಯಚರಣೆ ಪ್ರತಿ 10 ನಿಮಿಷಕ್ಕೊಂದರಂತೆ ಸಂಚರಿಸಲಿರುವ ಬಸ್‌ಗಳು 300 ಮಳಿಗೆಗಳು..!
ಶಿವಾನಂದ ವೃತ್ತದಿಂದ ವಿಂಡ್ಸರ್ ಮ್ಯಾನರ್‌ವರೆಗೆ ಹಾಗೂ ಕ್ರೆಸೆಂಟ್ ರಸ್ತೆಯಲ್ಲಿ, ಶಿವಾನಂದ ವೃತ್ತದ ಕೆಳಭಾಗದಲ್ಲಿ ಹಾಗೂ ಭಾರತ ಸೇವಾ ದಳ ಆವರಣದಲ್ಲಿಯೂ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಹೆಚ್ಚು ಕಲಾವಿದರು ಭಾಗವಹಿಸುತ್ತಿರುವ ಕಾರಣ 1,200 ಮಳಿಗೆಗಳ ಜೊತೆಗೆ ಹೆಚ್ಚುವರಿಯಾಗಿ 300 ಮಳಿಗೆ ಹಾಕಲಾಗುತ್ತದೆ ಎಂದು ತಿಳಿಸಿದರು.