ರಾಜ್ಯದಲ್ಲಿ ಒಂದು ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಸಣ್ಣ ಮಟ್ಟದಲ್ಲಿದ್ದ ಪ್ರಕರಣ ಇಂದು ದೇಶಾದ್ಯಂತ ಸದ್ದು ಮಾಡುತ್ತಿದೆ. ಉಡುಪಿಯ ನರ್ಸಿಂಗ್ ಕಾಲೇಜಿನಲ್ಲಿ ಸೌಚಾಲಯದಲ್ಲಿ, ವಿಧ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಪ್ರಕರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಈದೇ ವಿಚಾರಕ್ಕೆ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆಯುತ್ತಿವೆ. ಈಗಾಲೇ ರಾಷ್ಟ್ರೀಯ ಮಹೀಳಾ ಆಯೋಗದ ಸದಸ್ಯೆ ಖೂಷ್ಬು ಅವರು ಉಡುಪಿಯ ಘಟನೆ ನಡೇದ ಕಾಲೇಜಿಗೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಅಲ್ಲಿ ಆಡಳಿತ ಮಂಡಳಿ ಜೊತೆ ಚರ್ಚೆ ಮಾಡಿದ್ದಾರೆ.
ಇನ್ನೂ ಈ ಪ್ರಕರಣವನ್ನ ಗಂಭೀರವಾಗಿ ರಾಜ್ಯ ಸರ್ಕಾರ ತೆಗೆದುಕೊಂಡಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇನ್ನೊಂದು ಕಡೆ ಈ ಮೂರು ಮುಸ್ಲಿಂ ವಿಧ್ಯಾರ್ಥಿನಿಯರು ಹಿಂದು ವಿಧ್ಯಾರ್ಥಿನಿಯರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಈ ರೀತಿ ಘಟನೆ ನಡೆಯುತ್ತಿದೆ ಎಂದು ಕೂಡಾ ಬಿಜೆಪಿ ಆರೋಪಿಸಿದೆ. ಇಲ್ಲಿ ವಿಡಿಯೋ ಮಾಡಿ ಬೇರೆ ಬೇರೆ ರಾಜ್ಯ ಹಾಗೂ ಮುಸ್ಲಿಂ ಸಮುದಾಯದ ವಾಟ್ಸಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡಲಾಗಿದೆ. ಈಷ್ಟೆಲ್ಲ ಆದರೂ ಸಹ ಗೃಹ ಇಲಾಖೆ ಈ ಪ್ರಕರಣವನ್ನ ಸರಿಯಾಗಿ ತನಿಖೆ ಮಾಡುತ್ತಿಲ್ಲ, ಈ ಪ್ರಕರಣ ಉನ್ನತ ಮಟ್ಟದ ತನಿಖೆ ಆಗಬೇಕು. ಆ ಮೂರು ವಿಧ್ಯಾರ್ಥಿನಿಯರನ್ನ ಬಂಧಿಸಿ ವಿಚಾರಣೆ ಮಾಡಬೇಕು. ಈ ರೀತಿಯಾಗಿ ಎಷ್ಟು ವರ್ಷಗಳಿಂದ ಮಾಡಿದ್ದಾರೆ. ವಿಡಿಯೋ ಗಳನ್ನ ಎಲ್ಲಿ ಹಂಚಿಕೊಂಡಿದ್ದಾರೆ. ಆ ವಿದ್ಯಾರ್ಥಿನಿಯರ ಹಿಂದೆ ಜಾಲ ಏನಿದೆ ಎಂಬುದು ಸೂಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಇನ್ನೂ ಈ ಪ್ರಕರಣದ ಸತ್ಯಾಸತ್ಯತೆಯನ್ನ ತಿಳಿದುಕೊಳ್ಳಲು ಬಿಜೆಪಿ ಒಂದು ಮಹಿಳಾ ಸಮಿತಿಯನ್ನ ರಚನೆ ಮಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಂಡವನ್ನ ರಚನೆ ಮಾಡುತ್ತಿದ್ದಾರೆ. ಈ ತಂಡ ಉಡುಪಿ ಗೆ ತೆರಳಿ ಘಟನೆ ನಡೆದ ಕಾಲೇಜಿಗೆ ಹೋಗಿ ಅಲ್ಲಿ ವಿಧ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಮಾಹಿತಿ ಸಂಗ್ರಹ ಮಾಡಲಿದೆ ಎಂದು ತಿಳಿದು ಬಂದಿದೆ.ಇನ್ನೂ ಇದೇ ವಿಚಾರವನ್ನ ಇಟ್ಟುಕೊಂಡು ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲು ಪ್ಲ್ಯಾನ್ ಹಾಕಿ ಕೊಂಡಿದೆ ಎಂದು ಹೇಳಲಾಗುತ್ತಿದೆ.
ವರದಿ : ಬಸವರಾಜ ಹೂಗಾರ