ಬೆಂಗಳೂರು: ಬೆಂಗಳೂರಿನ ಹೋಟೆಲ್ & ರೆಸ್ಟೋರೆಂಟ್‌ಗಳಲ್ಲಿಅನವಶ್ಯಕ ಕಾಲಹರಣ ಮಾಡುವ ಕೆಲ ಗ್ರಾಹಕರಿಂದ ಹೋಟೆಲ್ ಮಾಲೀಕರಿಗೆ ಕಿರಿಕಿರಿ ಅನುಭವಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಹೋಟೆಲ್ ಮಾಲೀಕರ ಸಂಘ ನಿರ್ಧರ ಮಾಡಿದ್ದಾರೆ.
ಕೋಟ್ಯಂತರ ಮಂದಿಗೆ ಜೀವನ ನೀಡುತ್ತಿರುವ ಹೋಟೆಲ್ ಊಟವನ್ನು ನಂಬಿಕೊಂಡವರ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಅದೇ ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಹೋಟೆಲ್‌ಗಳೂ ತಲೆ ಎತ್ತಿದ್ದು, ಕಾಫಿ, ತಿಂಡಿ, ಊಟ ಸೇರಿದಂತೆ ಹಲವು ರೀತಿಯ ಆಹಾರ ಪದಾರ್ಥಗಳನ್ನು ಪೂರೈಸುತ್ತಿವೆ. ಆದರೆ, ಕೆಲ ಗ್ರಾಹಕರು ಹೋಟೆಲ್‌ಗಳಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡುತ್ತಿರುವುದು ಸಮಸ್ಯೆಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಹೋಟೆಲ್ ಮಾಲೀಕರು ನಿರ್ಧಾರ ಮಾಡಿದೆ.
ಒಂದಷ್ಟು ಬೋರ್ಡ್‌ಗಳನ್ನು ಅಳವಡಿಕೆ ಮಾಡುವುದು, ಅನವಶ್ಯಕ ಮಾತುಕತೆಗಳು ಬೇಡ ಎಂದು ಅರಿವು ಮೂಡಿಸಲು ಸಂಘವು ಮುಂದಾಗಲಿದೆ. ಒಟ್ಟಾರೆ ಇದಕ್ಕೆ ಗ್ರಾಹಕರು ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುವುದನ್ನು ಕಾದುನೋಡಬೇಕಿದೆ.