ಬೆಂಗಳೂರು: ಸಚಿವ ಸತೀಶ್ ಜಾರಕಿ ಹೊಳಿ ಡಿಸಿಎಂ ಡಿಕೆಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡಿತಾಯಿತ್ತು.ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಈಗಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆಕ್ರೋಶ ಜಾರಕಿ ಹೊಳಿಗೆ ಇತ್ತು. ಅದಕ್ಕೆ ಪ್ರತ್ಯೇಕವಾಗಿ ಅವರ ಬಣವನ್ನ ಸೃಷ್ಟಿ ಮಾಡಿಕೊಳ್ತಾಯಿದ್ರು..ಹೀಗಿರುವಾಗ ಇವತ್ತು ಡಿಕೆಶಿವಕುಮಾರ್ -ಸತೀಶ್ ಜಾರಕಿ ಹೊಳಿ ಭೇಟಿ ಆಗಿದ್ದಾರೆ.
ಬೆಳಗಾವಿ ರಾಜಕಾರಣ ಅಂದ್ರೆ ಜಾರಕಿಹೊಳಿ ಬ್ರದರ್ಸ್,ಜಾರಕಿಹೊಳಿ ಬ್ರದರ್ಸ್ ಅಂದ್ರೆ ಬೆಳಗಾವಿ ರಾಜಕಾರಣ ಹೀಗಿರುವಾಗ ಈವರ ನಡುವೆ ಡಿಸಿಎಂ ಡಿಕೆಶಿವಕುಮಾರ್ ಎಂಟ್ರಿಯಾಗಿ ಜಾರಕಿಹೊಳಿ ಬ್ರದರ್ಸ್ ನಿದ್ದೆಗೆಡಿಸಿದೆ.ಈದೇ ಕಾರಣಕ್ಕೆ ಮುನಿಸಿಕೊಂಡು ಸಮ್ಮಿಶ್ರ ಸರ್ಕಾರವನ್ನ ಪಥನ ಗೊಳಿಸಿ ಬಿಜೆಪಿ ಸೇರ್ಪಡೆ ಆಗಿದ್ದಾರೆ ರಮೇಶ್ ಜಾರಕಿ ಹೊಳಿ.ಇಗಾ ಈದೇ ಸಂಧರ್ಭ ಸತೀಶ್ ಜಾರಕಿ ಹೊಳಿಗೂ ಎದುರಾಗಿದೆಯಾ ಎಂಬ ವಿಚಾರ ಚರ್ಚೆ ಆಗುತ್ತಿದೆ.
ಸತೀಶ್ ಜಾರಕಿ ಹೊಳಿ ಇತ್ತೀಚೆಗೆ ಡಿ.ಕೆ ಶಿವಕುಮಾರ್ ವಿರುದ್ಧ ಅಸಮಧಾನ ಹೊರ ಹಾಕಿದ್ರು.ಪ್ರತ್ಯೇಕ ಬಣ ಕಟ್ಟುತ್ತಿದ್ರು.ಡಿ.ಕೆ ಶಿವಕುಮಾರ್ ಬೆಳಗಾವಿ ರಾಜಕಾರಣದಲ್ಲಿ ನಾಲ್ಕು ಐದು ಭಾರಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಬಹಿರಂಗವಾಗಿಯೇ ಗುಡಿಗಿದ್ರು. ಈ ಹಿನ್ನಲೆ ಅವರದೇ ಒಂದು ಶಾಸಕರ ಬಣವನ್ನು ಕಟ್ಟಿಕೊಂಡು ವಿದೇಶ ಪ್ರವಾಸಕ್ಕೂ ತಯಾರಿ ನಡಿಸಿದ್ರು .ಈ ವಿಚಾರ ಕಾಂಗ್ರೆಸ್ ಹೈಕಮಾಂಡ್ ಗೆ ತಿಳಿಯುತ್ತಿದ್ದಂತೆ ವಿದೇಶ ಪ್ರವಾಸವನ್ನು ರದ್ದು ಪಡಿಸಿದ್ರು..ನಂತರ ಸತೀಶ್ ಜಾರಕಿ ಹೊಳಿ ಸಮಾಧಾನ ಪಡಿಸಲು ಸಿಎಂ ಡಿಸಿಎಂ ಗೆ ಸೂಚನೆ ಕೊಟ್ರು.
ಒಟ್ಟಾರೆ ಇಂದು ಡಿಸಿಎಂ ಡಿಕೆಶಿವಕುಮಾರ್ ಸತೀಶ್ ಜಾರಕಿ ಹೊಳಿ ಭೇಟಿ.. ಸಾಕಷ್ಟು ಪ್ರಶ್ನೆಗೆ ಎಡೆಮಾಡಿಕೊಟ್ಟಿದ್ದಾರೆ. ಈ ಹಿನ್ನಲೆ ಡಿಕೆಶಿವಕುಮಾರ್ ಜಾರಕಿ ಹೊಳಿ ಭೇಟಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ…
ವರದಿ: ಬಸವರಾಜ ಹೂಗಾರ