Crime NewsState News

ಮನೆಯೊಳಗೆ ನೇತಾಡುತ್ತಿತ್ತು ಗ್ರಾಪಂ ಸದಸ್ಯೆ ಶವ..!

ತುಮಕೂರು : ಅನುಮಾನಾಸ್ಪದವಾಗಿ ಗ್ರಾಮ ಪಂಚಾಯತ್‌ನ ಸದಸ್ಯೆ ಮೃತಪಟ್ಟಿದ್ದಾರೆ. ತುಮಕೂರು ತಾಲೂಕಿನ ಸಂಗಾಪುರದ ಗೊಲ್ಲರಹಟ್ಟಿಯಲ್ಲಿ ಘಟನೆ ನಡೆದಿದೆ. ಭಾಗ್ಯ (30) ಮೃತ ದುರ್ದೈವಿ.

ಭಾಗ್ಯ ಹಿರೇಹಳ್ಳಿ ಗ್ರಾಮ ಪಂ‌ಚಾಯತ್‌ನ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆಯಾಗಿದ್ದರು. ಕಳೆದ ಶುಕ್ರವಾರ ನೇಣು ಬಿಗಿದ ಸ್ಥಿತಿಯಲ್ಲಿ ಭಾಗ್ಯಳ ಶವ ಪತ್ತೆಯಾಗಿದೆ. ಆದರೆ ಭಾಗ್ಯಳ ಸಂಬಂಧಿಕರು ಈ ಸಾವಿನ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲವಾಗಿರಲಿಲ್ಲ ಎಂದಿದ್ದಾರೆ.

ಸದ್ಯ ತುಮಕೂರಿನ ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾಗ್ಯಳ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ತಿಳಿಯಲು ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!