Cinema

ಟೈಗರ್ ನಾಗ್ ಅಡವಿ ಚಿತ್ರಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ..!

ಅಡವಿ ಚಿತ್ರಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ, ಆಂಧ್ರಪ್ರದೇಶದ ತಿರುಪತಿ ಟ್ರಸ್ಟ್ ಮತ್ತು ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ (ಐಎಫ್‌ಎಂಎ ) ಆಯೋಜಿಸಿದ್ದ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ತಿರುಪತಿ ಇಲ್ಲಿ ಅತ್ಯುತ್ತಮ ಕಥೆ. ಅತ್ಯುತ್ತಮ ಗೀತರಚನೆ ಅತ್ಯುತ್ತಮ ಖಳನಟ ಹೀಗೆ ಮೂರು ವಿಭಾಗಗಳಲ್ಲಿ ಅಡವಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಅಡವಿ ಚಿತ್ರವು ವಿಭಿನ್ನ ಕಥಾಹಂದರವನ್ನು ಹೊಂದಿದ್ದು ಪರಿಸರ ರಕ್ಷಣೆ ಹಾಗೂ ಆದಿವಾಸಿಗಳ ಬದುಕಿನ ಮೂಲ ಭೂತ ಸಮಸ್ಯೆ ಹಾಗೂ ಸಂವಿಧಾನದ ಹರಿವು ಮೂಡಿಸುವುದರ ಬಗ್ಗೆ ದ್ವನಿ ಎತ್ತಿದ್ದು ಚಿತ್ರದ ಹಾಡುಗಳು ಹಾಗೂ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ 90 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಚಿತ್ರ ರಸಿಕರು. ಪರಿಸರ ಪ್ರೇಮಿಗಳು ಚಿಂತಕರು ಸಾಹಿತಿಗಳು ಪ್ರಗತಿಪರ ರನ್ನು ದಿನದಿಂದ ದಿನಕ್ಕೆ ಸೆಳೆಯುತ್ತಿದೆ.

ಇದೀಗ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ಕಥೆ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ. ಟೈಗರ್ ನಾಗ್ ಅವರು ಅಡವಿ ಕಾದಂಬರಿ ಬರೆದು ಕರ್ನಾಟಕ ರಾಜ್ಯದ ಗೃಹ ಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರು ಆದ ಡಾ ಜಿ ಪರಮೇಶ್ವರ ಅವರಿಂದ ಬಿಡುಗಡೆ ಮಾಡಿಸಲಾಗಿತ್ತು ತುಮಕೂರು ಜಿಲ್ಲೆಯಲ್ಲಿ ನೆಡೆಯುವ ಸಿನಿಮಾದ ಕಥೆಗೆ ಅತ್ಯುತ್ತಮ ಕಥೆಗಾರ ಎಂದು ಟೈಗರ್ ನಾಗ್ ಆಯ್ಕೆಯಾಗಿ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ ಕನ್ನಡ ಚಿತ್ರರಂಗದ ದಶಕಗಳಿಂದ ಇದ್ದ ಸಮಸ್ಯೆ ಸೆನ್ಸಾರ್ ಅಧಿಕಾರಿಯನ್ನು ಸಿಬಿಐ ಡ್ರಾಪ್ ಮಾಡಿಸಿ ಚಿತ್ರರಂಗದ ಮೆಚ್ಚುಗೆಗೆ ಪಾತ್ರರಾಗಿ ಎಲ್ಲರ ಗಮನ ಸೆಳೆದಿದ್ದ ಇವರು ಅಂತರಾಷ್ಟ್ರೀಯ ಪ್ರಶಸ್ತಿಗೆ ಭಜನರಾಗಿದ್ದಾರೆ.

ಚಂದನವನದ ಖ್ಯಾತ ಹಿರಿಯ ಸಾಹಿತಿ ವಿ ಮನೋಹರ್ ಅವರು ಅಡವಿ ಚಿತ್ರಕಾಗಿ ಬರೆದ ಹಾಡಿಗೆ ಅತ್ಯುತ್ತಮ ಗೀತ ರಚನೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ವಿ ಮನೋಹರ ಅವರು ಚಂದನವನದಲ್ಲಿ ಈಗಾಗಲೇ 2500 ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದು ಅವರಿಗೆ ಸಂದ ಈ ಪ್ರಶಸ್ತಿ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಸಂದ ಗೌರವವಾಗಿದೆ. ಉದಯೋನ್ಮುಖ ಪ್ರತಿಭೆ ಅರ್ಜುನ್ ಪಾಳೇಗಾರ ಅಡವಿ ಚಿತ್ರದಲ್ಲಿನ ತಮ್ಮ ನಟನೆಗಾಗಿ ಅತ್ಯುತ್ತಮ ಖಳ ನಟ ಪ್ರಶಸ್ತಿ ಪಡೆದಿದ್ದಾರೆ.

ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಸಮಾರಂಭದಲ್ಲಿ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅಡವಿ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಟೈಗರ್ ನಾಗ್ ಅಡವಿ ಚಿತ್ರಕ್ಕೆ ಲಭಿಸಿದ ಪ್ರಶಸ್ತಿಯನ್ನು ದೇಶದ ಹೆಮ್ಮೆಯ ಸಂವಿಧಾನಕ್ಕೆ, ಹಾಗೂ ಪರಮಪೂಜ್ಯ ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಅರ್ಪಿಸಿದ್ದೇನೆ ಕಾರಣ ಶೂದ್ರನಾಗಿ ಮುಂದೆ ಮಡಿಕೆ ಹಿಂದೆ ಪೊರಕೆ ಕಟ್ಟಿಕೊಂಡು ಸುತ್ತಬೇಕಿದ್ದವನಿಗೆ, ಇಂದು ಸಂವಿಧಾನದ ಶಕ್ತಿಯಿಂದ ಎಲ್ಲರಂತೆ ಸಮಾನತೆಯಿಂದ ಬದುಕಲು ಅವಕಾಶ ಸಿಕ್ಕಿದೆ, ಈ ಅವಕಾಶದಿಂದ ನಾನು ನಿರ್ದೇಶಕ, ನಿರ್ಮಾಪಕ ಕೂಡ ಆಗಿದ್ದೇನೆ, ಬುದ್ಧ ಬಸವ ಅಂಬೇಡ್ಕರ್ ಕುವೆಂಪು ಕನಕದಾಸರು ಪೆರಿಯಾರ್ ಹಾಗೂ ಸಮಾನತೆಗಾಗಿ ಧ್ವನಿ ಎತ್ತಿದ ಎಲ್ಲಾ ಮಹನೀಯರ ಅನುಯಾಯಿ ಗಳೆಲ್ಲರ ಸಹಕಾರ ಬೆಂಬಲ ಮಾರ್ಗದರ್ಶನದಿಂದ ನಮ್ಮ ಸಂವಿಧಾನ ಸಿನಿ ಕಂಬೈನ್ಸ್ ಸಂಸ್ಥೆ ಹಾಗೂ ಮಧುಗಿರಿ ಸಾಧಿಕ್ ಸಾಬ್ ನಿರ್ಮಾಣದ ಅಡವಿ ಚಿತ್ರಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿದೆ, ನಮ್ಮೆಲ್ಲಾ ಮುಂದಿನ ಪ್ರಯತ್ನಗಳಿಗೆ ನಿಮ್ಮ ಸಹಕಾರ ಹೀಗೇ ಇರಲಿ ಎಂದರು.

ಚಿರದಲ್ಲಿ ನಾಯಕ ಮೋಹನ್ ಮೌರ್ಯ, ನಟಿ ಶಿಲ್ಪ, ನಟಿ ಆರುಂದತಿ ಲಾಲ್, ರಾಮ ನಾಯಕ್ ಟೈಗರ್ ನಾಗ್, ಅರ್ಜುನ್ ಪಾಳೇಗಾರ, ರವಿಕುಮಾರ ಸನ, ರಥಾವರ ದೇವು, ಮಂಜೀವ, ವೃಶ್ಚಿಕ. ಚಿರು ಶ್ರೀ ನಾಗ್ ಶಿಲ್ಪ ಟೈಗರ್ ನಾಗ್,ಹರಾ ಮಹಿಷಾ ಬೌದ್ಧ ಜಗದೀಶ್ ಮಹದೇವ್. ವಾಲೆ ಚಂದ್ರಣ್ಣ, ಆರ್ ಅನಂತರಾಜು, ಮತ್ತಿತರರು ನಟಿಸಿದ್ದಾರೆ.

ವಿಪಿಂದ್ ವಿ ರಾಜ್ ಛಾಯಾಗ್ರಹಣ, ಮಂಜು ಮಹಾದೇವ್ ಸಂಗೀತ, ಕೆ. ಮಂಜು ಕೋಟೇಕೆರೆ ಹಾಗೂ ಟೈಗರ್ ನಾಗ್ ಸಂಭಾಷಣೆ, ಸಂಜೀವ್ ರೆಡ್ಡಿ ಸಂಕಲನ. ಕೆ. ಮಂಜು ಕೋಟೆಕೆರೆ ಸಹನಿರ್ದೇಶನ, ಬಾಬು ಖಾನ್ ಕಲಾ ನಿರ್ದೇಶನ, ಎ. ವಿ. ವಿಜಯಕುಮಾರ್ ನಿರ್ಮಾಣ ನಿರ್ವಹಣೆ, ಎ ಆರ್ ಸಾಯಿರಾಂ ಕ್ರಿಯೇಟಿವ್ ಹೆಡ್, ಸಾಧಿಕ್ ಸಾಬ್ ಮಧುಗಿರಿ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರ ಶೀಘ್ರ ದಲ್ಲೇ ತೆರೆ ಕಾಣಲಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!