ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಸೋಲದೇವನಹಳ್ಳಿ, ಹಂದಿಗುಟ್ಟೆ ಗ್ರಾಮಗಳ ಸುತ್ತಮುತ್ತ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸುತ್ತಿದೆ. ನಿನ್ನೆ ರಾತ್ರಿ ರಾಜಣ್ಣ ಎಂಬುವರ ಅಡಕೆ ತೋಟದಲ್ಲಿ ಚಿರತೆ ಓಡಾಡಿದ್ದು ಮನೆ ಮುಂದೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಚಿರತೆ ಚಲನವಲನ ಸೆರೆಯಾಗಿದೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ರಾತ್ರಿ ವೇಳೆ ಓಡಾಡಲು ಗ್ರಾಮಸ್ಥರು ಭಯಪಡುವಂತಾಗಿದೆ.
ಕೂಡ್ಲು ಸಮೀಪ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ನೈಸ್ ರೋಡ್ ಸಮೀಪದ ಚಿಕ್ಕತೋಗೂರು ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಹೆಜ್ಜೆ ಗುರುತುಗಳು ಸಹ ಪತ್ತೆಯಾಗಿದ್ದವು. ಈಗ ಮತ್ತೆ ಸೋಲದೇವನಹಳ್ಳಿ, ಹಂದಿಗುಟ್ಟೆ ಗ್ರಾಮಗಳ ಸುತ್ತಮುತ್ತ ಚಿರತೆ ಓಡಾಡುವ ಸಿಸಿ ಟಿವಿ ದೃಶ್ಯಗಳು ಪತ್ತೆಯಾಗಿವೆ.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ವಿನೋದ್ ರಾಜ್ ತೋಟದ ಬಳಿ ಪ್ರತ್ಯಕ್ಷವಾಗಿದೆ. ತೋಟದ ಮುಂದಿನ ಗೇಟ್ ಬಳಿ ಓಡಾಡಿರುವ ಚಿರತೆ ದೃಶ್ಯ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ಈ ಭಾಗದಲ್ಲಿ ಸಾಕಷ್ಟು ದಿನಗಳಿಂದ ಚಿರತೆ ದಾಳಿ ಮಾಡುತ್ತಿವೆ. ದಾಳಿಯಾದರು ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳು ಮುಂದಾಗಿಲ್ಲ ಎನ್ನಲಾಗಿದೆ.