ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 3,52,991 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 2,812 ಸೋಂಕಿತರು ಮೃತಪಟ್ಟಿದ್ದಾರೆ ಮತ್ತು 2,19,272 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಈವರೆಗೆ ಒಟ್ಟು 1,73,13,163 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,95,123 ಮಂದಿ ಸಾವಿಗೀಡಾಗಿದ್ದಾರೆ.
ಈವರೆಗೂ ಒಟ್ಟು 1,43,04,382 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, 28,13,658 ಸಕ್ರಿಯ ಪ್ರಕರಣಗಳಿವೆ.
ಏ. 25ರ ಹೊತ್ತಿಗೆ ದೇಶದಲ್ಲಿ 27,93,21,177 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಭಾನುವಾರ ಒಂದೇ ದಿನ 14,02,367 ಮಾದರಿಗಳು ಪರೀಕ್ಷೆಗೆ ಒಳಪಟ್ಟಿವೆ ಎಂದು ಭಾರತೀಯ ವೈದ್ಯಕೀಯ ಅಧ್ಯಯನ ಸಂಸ್ಥೆ (ಐಸಿಎಂಆರ್) ತಿಳಿಸಿದೆ.
ಕೊರೊನಾ-19 ವ್ಯಾಕ್ಸಿನೇಷನ್ ಕಾರ್ಯಕ್ರಮದ ಮೂರನೇ ಹಂತದ ನೋಂದಣಿ ಏಪ್ರಿಲ್ 28 ರಿಂದ ಪ್ರಾರಂಭವಾಗಲಿದೆ. ಮೂರನೇ ಹಂತದ ಅಡಿಯಲ್ಲಿ, ಮೇ 1 ರಿಂದ ಪ್ರಾರಂಭವಾಗಿ, 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಕೊರೊನಾ ವೈರಸ್ ಮತ್ತು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಕೋವಿನ್ ಪ್ಲಾಟ್ಫಾರ್ಮ್ ಮೂಲಕ ಏಪ್ರಿಲ್ 28 ರಿಂದ ಪ್ರಾರಂಭವಾಗಲಿದೆ.