ಕಲಬುರಗಿ : ಶುದ್ಧ ಕುಡಿಯುವ ನೀರು, ಚರಂಡಿ, ಉತ್ತಮ ರಸ್ತೆ, ಬೀದಿ ದೀಪ ಇವುಗಳನ್ನು ಹೊಂದುವುದು ಪ್ರತಿಯೊಬ್ಬ ಪ್ರಜೆಯ ಸಾಮಾನ್ಯ ಹಕ್ಕಾಗಿದೆ. ಈ ಹಕ್ಕನ್ನು ಪ್ರತಿಯೊಬ್ಬ ಪ್ರಜೆ ಹೊಂದಬೇಕು ಎಂಬುವುದಕ್ಕಾಗಿ ಸರ್ಕಾರ ಅನುದಾನವನ್ನು ನೀರಿನಂತೆ ಖರ್ಚು ಮಾಡುತ್ತದೆ ಆದರೆ ಈ ಗ್ರಾಮ ಜನರು ಮಾತ್ರ ಇವುಗಳಿಂದ ಕಳೆದ ಹಲವು ವರ್ಷಗಳಿಂದ ವಂಚಿತರಾಗಿದ್ದಾರೆ.
ಎತ್ತ ನೋಡಿದರು ಕಸದ ರಾಶಿ ಕಣ್ಣಿಗೆ ಕಾಣುವದು, ರಸ್ತೆಯ ಮೇಲೆ ಹರಿಯುವ ಚರಂಡಿ ನೀರು, ಜೆಜೆಎಂ ಕಾಮಗಾರಿ ಮಾಡಿ ಅರ್ಥಕ್ಕೆ ಬಿಟ್ಟು ಹೋದ ಕೆಲಸ ಇದು ಕಲಬುರಗಿ ತಾಲೂಕಿನ ಕುಮಸಿ ಗ್ರಾಮದ ಸ್ಥಿತಿ, ಕುಮಸಿ ಗ್ರಾಮದಲ್ಲೆ ಗ್ರಾಮ ಪಂಚಾಯತಿಯಿದ್ದು ಈ ಪರಿಸ್ಥಿತಿ ಇದ್ದರೆ ಇನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಸ್ಥಿತಿ ಹೇಗಿರಬಹುದು ಎಂದು ಊಹಿಸಲೇಬೇಕು. ಈ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು ಪ್ರತಿ ವರ್ಷ ಗ್ರಾಮ ಪಂಚಾಯಿತಿ ನಿಗದಿಪಡಿಸುವ ಎಲ್ಲಾ ರೀತಿಯ ತೆರಿಗೆಗಳನ್ನು ತಪ್ಪದೇ ಬರಿಸುತ್ತಾ ಬರುತ್ತಿದ್ದಾರೆ, ಜನರಿಂದ ತೆರಿಗೆ ಬರಿಸಿಕೊಳ್ಳುವ ಗ್ರಾಮ ಪಂಚಾಯಿತಿ ಪ್ರತಿವರ್ಷ ಕ್ರಿಯಾಯೋಜನೆಯಲ್ಲಿ ಮಾತ್ರ ಈ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡುತ್ತಿಲ್ಲ ಇದರಿಂದ ಮೂಲಭೂತ ಸೌಲಭ್ಯಗಳನ್ನು ಸರಿಯಾಗಿ ಸಿಗದೇ ಪರದಾಡುವಂತಾಗಿದೆ.
ಇನ್ನು ಗ್ರಾಮ ಪಂಚಾಯತಿಯಿಂದ ಸರಿಯಾದ ಕ್ರಿಯಾ ಯೋಜನೆ ಮಾಡದೆ ಹಾಗೂ ನರೇಗಾದಿಂದ ಕೂಲಿ ಕೆಲಸ ನೀಡದೆ ಇರುವದರಿಂದ ಜನರು ದೊಡ್ಡ ನಗರಗಳ ಕಡೆ ಗುಳೆ ಹೋಗುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯೆ ಮಲ್ಲಮ್ಮ ಜಮಾದಾರ್ ಅವರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ಸಾರ್ವಜನಿಕ ಶೌಚಾಲಯ ವಿಲ್ಲದೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರ ಅಳಲಾಗಿದೆ. ಅವೈಜ್ಞಾನಿಕವಾಗಿ ಚಂರಂಡಿ ನಿರ್ಮಾಣ ಮಾಡಿ ಅರ್ಥಕ್ಕೆ ಬೀಡಲಾಗಿದ್ದು ಚರಂಡಿ ನಿರ್ಮಿಸಲು ಹಾಕಿದ ರಾಡ್ ಗಳು ಹಾಗೆ ಬಿಟ್ಟಿದರಿಂದ ಮಕ್ಕಳು ಹಾಗೂ ವೃದ್ಧರು ಈ ರಸ್ತೆಯ ಮೂಲಕ ಚಲಿಸುವರಿಂದ ಸಾವಿಗೆ ಆಹ್ವಾನ ನೀಡಿದಂತಾಗಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಂಡುವಂತೆ ನಿವಾಸಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯೆ ಲಿಖಿತವಾಗಿ, ಮೌಖಿಕವಾಗಿಯು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂಬುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇವಾಗಲಾದರು ಎಚ್ಚೆತ್ತುಕೊಂಡು ಗ್ರಾಮದ ಜನರ ಸಮಸ್ಯಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
ವರದಿ : ಮಹೇಶ ದಿವಾಕರ್ ರಾಜ್ ನ್ಯೂಸ್ ಕಲಬುರಗಿ