ಕನ್ನಡದ ಜೋಶ್ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದ ನಟಿ ನಿತ್ಯಾ ಮೆನನ್ ಆ ನಂತರ ಮೈನಾ ಮತ್ತು
ಕೋಟಿಗೊಬ್ಬ 2 ಚಿತ್ರಗಳಿಂದ ಕನ್ನಡಿಗರ ಮನಗೆದ್ದ ಚೆಲುವೆ. ಇದೀಗ ದಕ್ಷಿಣ ಭಾರತದಲ್ಲಿ ಟಾಪ್ ನಟಿಯರಲ್ಲಿ ಈಕೆ ಕೂಡ ಒಬ್ಬರು. ಸದಾ ಸಿನಿಮಾ, ವೆಬ್ ಸಿರೀಸ್ ಎಂದು ಬ್ಯುಸಿ ಇರುವ ನಿತ್ಯಾ ಮೆನನ್ ಇದೀಗ ಮದುಮಗಳಾಗಿ ಮಿಂಚುತ್ತಿದ್ದಾರೆ.
ಮುದ್ದು ಮುಖದ ಚೆಲುವೆ ನಿತ್ಯಾ ಮೆನನ್ ಮದು ಮಗಳಾಗಿದ್ದಾರೆ. ಅರೆರೆ ಮದುವೆ ಆಯ್ತಾ ಅನ್ನಬೇಡಿ. ಅವರು ಬ್ರೈಡಲ್ ವೇರನ್ ಲುಕ್ ಫೋಟೋಶೂಟ್ ಮಾಡಿಸಿದ್ದಾರೆ. ಇದೀಗ ಈ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ರೈಡಲ್ ಲುಕ್‍ನಲ್ಲಿ ಮಿಂಚುತ್ತಿರುವ ನಿತ್ಯಾ ಮೆನನ್ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ನಟಿ ನಿತ್ಯಾ ವೈಟ್ ಗೌನ್‍ನಲ್ಲಿ ಅಪ್ಸರೆಯಂತೆ ಕಂಗೊಳಿಸುತ್ತಿರುವ ಮಧು ಮಗಳಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಪುಟ್ಟು ಹುಡುಗಿಯ ಜೊತೆ ತುಂಟಾಟ ಆಡುತ್ತಿರುವ ಮಧು ಮಗಳಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ.
ಇನ್ನು ನಟಿ ನಿತ್ಯಾ ಮೆನನ್ ಕೈಯಲ್ಲಿ ಈಗ ತೆಲುಗಿನ ಗಮನಂ ಮತ್ತು
ಕೋಲಂಬಿ ಚಿತ್ರಗಳಿವೆ.