State News

ಅಂಬೇಡ್ಕರ್ ಪ್ರತಿಮೆಗೆ ಅಪಮಾನ; ನಾಲ್ವರ ಬಂಧನ

ಬೆಂಗಳೂರು : ಕಲಬರುಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಪ್ರಕರಣದಲ್ಲಿ ಈಗಾಗಲೇ ನಾಲ್ವರ ಬಂಧನವಾಗಿದ್ದು, ಸೂಕ್ತ ತನಿಖೆ ನಡೆಸಿ ಮುಂದಿನ ಕ್ರಮವನ್ನು ಜರಗಿಸಲಾಗುವುದು ಎಂದು ಡಾ ಜಿ ಪರಮೇಶ್ವರ್ ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಇದಾಗಲೇ ನಾಲ್ವರನ್ನು ಬಂಧಿಸಿದ್ದಾರೆ. ಇದರ ಹಿಂದಿನ ಉದ್ದೇಶ ಏನು ಎಂದು ಗೊತ್ತಾಗಲು ತನಿಖೆಗೆ ಹೇಳಿದ್ದೇನೆ. ಯಾಕೆಂದ್ರೆ ಈ ಘಟನೆ ಆಗಬೇಕಾದರೆ ಏನಾದರೂ ಉದ್ದೇಶ ಇರುತ್ತದೆ ಎಂದರು.

ಈ ನಿಟ್ಟಿನಲ್ಲಿ ವಿಚಾರಣೆಯನ್ನು ನಡೆಸಿ ಮುಂದಕ್ಕೆ ಸೂಕ್ತ ತನಿಖೆ ಕ್ರಮಕೈಗೊಳ್ಳುತ್ತೇವೆ. ಆರೋಪಿಗಳನ್ನು ನಾಯ್ಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ ಎಂದರು. ಇನ್ನು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಬಿಜೆಪಿ ಆಗ್ರಹದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಅವರಿಗೆ ಯಾರು ಮಾಡಿದ್ದಾರೆ ಅಂತಾ ಗೊತ್ತಾಗುತ್ತೆ. ಆವಾಗ ಅವರೇ ಸುಮ್ಮನಾಗುತ್ತಾರೆ. ಮಾಹಿತಿ ಕೆಲವೊಂದು ಹೇಳೊಕ್ಕೆ ಆಗಲ್ಲ ಎಂದು ಮಾರ್ಮಿಕವಾಗಿ ತಿರುಗೇಟು ನೀಡಿದರು.

ಪ್ರತಿಮೆಗೆ ಅವಮಾನ ಮಾಡಲು ಯಾರು ಹೇಳಿಕೊಟ್ಟಿದ್ದಾರೆ ಹಾಗೂ ಇದರ ಹಿಂದೆ ಯಾರಿದ್ದಾರೆ? ಎಲ್ಲವೂ ಕೂಡ ಪರಿಶೀಲನೆ ನಡೆಸಬೇಕಾಗುತ್ತೆ ಎಂದು ಗೃಹ ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು. ಇನ್ನು ಇದೇ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಆಗುವ ವಿಚಾರದ ಕುರಿತಾದ ಪ್ರಶ್ನೆಗೆ, ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಚಿವ ಪರಮೇಶ್ವರ್ ಉತ್ತರ ನೀಡಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!