ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಅವರು ಕೊರೊನಾ ಸೊಂಕಿಗೆ ನಿಧನವಾಗಿದ್ದಾರೆ. ಕೊರೊನಾ ಸೊಂಕಿನಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಳೆದ ಒಂದು ವಾರದ ಹಿಂದೆ ಅವರಿಗೆ ಕೊರೊನಾ ಸೊಂಕು ಇರುವುದು ಪತ್ತೆಯಾಗಿತ್ತು, ಚಿಕಿತ್ಸೆಗಾಗಿ ಅವರು ಮೂರು ದಿನದ ಹಿಂದೆ ಎಂ ಎಸ್ ರಾಮಯ್ಯ ಆಸ್ಪತ್ರೆ ದಾಖಲಾಗಿದ್ದರು. ತುಮಕೂರು ಜಿಲ್ಲೆ ಕುಣಿಗಲ್ ಮೂಲದ ರಾಮು ಅವರು ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು.
ಕನ್ನಡದ ಪ್ರಖ್ಯಾತ ನಟರ ಸಿನಿಮಾಗಳಿಗೆ ಅವರು ಬಂಡವಾಳ ಹೂಡಿ ಕೋಟಿ ನಿರ್ಮಾಪಕ ರಾಮು ಅಂತ ಹೆಸರು ಪಡೆದುಕೊಂಡಿದ್ದರು. ಪತ್ನಿ ಮಾಲಾಶ್ರೀ. ಇಬ್ಬರು ಮಕ್ಕಳನ್ನು ರಾಮು ಅವರು ಅಗಲಿದ್ದಾರೆ.
ಸಿಂಹದಮರಿ, ಭಾವ ಭಾಮೈದ, ಮಲ್ಲ, ಕಲಾಸಿಪಾಳ್ಯ, ರಜನಿ, ಚಾಮುಂಡಿ, ನಂಜುಂಡಿ, ದುರ್ಗಿ, ಸರ್ಕಲ್ ಇನ್ಸ್ ಪೆಕ್ಟರ್, ಲೇಡಿ ಪೋಲೀಸ್, ಲೇಡಿ ಕಮಿಷನರ್, ಕಿಚ್ಚ, ಕಿರಣ್ ಬೇಡಿ, ಲಾ ಅಂಡ್ ಆರ್ಡರ್, ಏ.ಕೆ.47, ರಾಕ್ಷಸ, ಹಾಲಿವುಡ್ ಮುಂತಾದ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ.