ಬೆಂಗಳೂರು: ಕೊರೊನಾ 2ನೇ ಅಲೆ ಅಬ್ಬರಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್ಡೌನ್ ಹೇರಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದೆ. ಮೇ 12ರವರೆಗೆ ಹೊಸ ಲಾಕ್ಡೌನ್ ಮಾರ್ಗಸೂಚಿ ಅನ್ವಯವಾಗಲಿದೆ.
ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರವೇ ಅಗತ್ಯ ವಸ್ತುಗಳನ್ನು ಖರೀದಿಗೆ ಅವಕಾಶ ನೀಡಲಾಗಿದೆ. ರಾಜ್ಯಾದ್ಯಂತ ಎಲ್ಲಾ ಧಾರ್ಮಿಕ ಸ್ಥಳಗಳಿಗೂ ನಿರ್ಬಂಧವೇರಲಾಗಿದೆ. ದೇವಸ್ಥಾನಗಳು, ಚರ್ಚ್, ಮಸೀದಿಗಳಿಗೆ ಭಕ್ತರ ಭೇಟಿ ನೀಡುವಂತಿಲ್ಲ. ಈಗಾಗಲೇ ಜಾತ್ರೆ, ಧಾರ್ಮಿಕ ಮಹೋತ್ಸವಗಳಿಗೆ ಸರ್ಕಾರ ನಿರ್ಬಂಧ ಹೇರಿದ್ದು, ಅದು ಮುಂದುವರೆಯಲಿದೆ. ನಾಳೆಯಿಂದ ಎಲ್ಲಾ ರೀತಿ ರಾಜಕೀಯ ಚಟುವಟಿಗಳು ಬಂದ್ ಆಗಲಿವೆ. ಯಾವುದೇ ಸಭೆ, ಸಮಾರಂಭಗಳು ನಡೆಯುವಂತಿಲ್ಲ.
ಇನ್ನು ಮದುವೆ ಸಮಾರಂಭಗಳಿಗೆ 50 ಜನ, ಅಂತ್ಯಸಂಸ್ಕಾರಕ್ಕೆ 20 ಮಂದಿ, ಕೊರೊನಾದಿಂದ ಮೃತಪಟ್ಟರೆ ಕೇವಲ ಐವರು ಮಾತ್ರ ಭಾಗಿಯಾಗಬೇಕು ಎಂಬ ನಿಯಮ ಮುಂದುವರೆಯಲಿದೆ
ಈ ಅವಧಿಯಲ್ಲಿ ನಿಗದಿಯಾಗಿರುವ ವಿಮಾನಗಳು ಮತ್ತು ರೈಲುಗಳು ಪ್ರಯಾಣ ಮುಂದುವರಿಸಬಹುದು. ಟ್ಯಾಕ್ಸಿಗಳು, ಆಟೋ ರಿಕ್ಷಾಗಳು ಸಂಚಾರ ಮಾಡುವಂತಿಲ್ಲ. ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ / ಕೋಚಿಂಗ್ ಸಂಸ್ಥೆಗಳು ಇತ್ಯಾದಿಗಳು ಇರೋದಿಲ್ಲ, ವೈದ್ಯಕೀಯ ಶಿಕ್ಷಣ, ಪೋಲಿಸ್, ಹೋಮ್ ಗಾರ್ಡ್ಸ್, ಪ್ರಿಸ್ ಆನ್ಸ್, ಸಿವಿಲ್ ಡಿಫೆನ್ಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಕಂದಾಯ, ಜಿಲ್ಲೆ ರಿಕ್ಟ್ / ಸಬ್-ರೆಜಿಸ್ಟರ್ ಕಚೇರಿಗಳು ಮತ್ತು ಕಾರಾಗೃಹಗಳು ಸಿಬ್ಬಂದಿಗೆ ಕೆಲಸ ಮಾಡಲು ಅವಕಾಶ, ಸಾರ್ವಜನಿಕ ಸೌಲಭ್ಯಗಳಾದ ಪೆಟ್ರೋಲಿಯಂ, ಸಿಎನ್ ಜಿ, ಎಲ್ ಪಿಜಿ ಸೇರಿದಂತೆ. ಪಿಎನ್‌ಜಿ ಶಕ್ತಿ ಉತ್ಪಾದನೆ ಮತ್ತು ಪ್ರಸರಣ ಘಟಕಗಳು, ಪೋಸ್ಟ್ ಆಫಿಸ್, ವಿಪತ್ತು ನಿರ್ವಹಣೆ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ವಿನಾಯ್ತಿ.