State News

ವಿಶೇಷ ಚೇತನ ಮಹಿಳೆಯೊಬ್ಬರ ಅಹವಾಲು ಸ್ವೀಕರಿಸಿದ ಸಿಎಂ..!

ಬೆಂಗಳೂರು : ಜನಸಾಮಾನ್ಯರ ಅಹವಾಲು ಆಲಿಸಿ, ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಸಿಎಂ ಸಿದ್ದರಾಮಯ್ಯರಿಂದ “ಜನಸ್ಪಂದನ” ಕಾರ್ಯಕ್ರಮ ನಡೆಯುತ್ತಿದ್ದು ಈ ವೇಳೆ ನಾನು ಡಬ್ಬಲ್ ಡಿಗ್ರಿ ಮಾಡಿದ್ದೇನೆ. ಆದರೂ ನನಗೆ ಉದ್ಯೋಗ ಇಲ್ಲ. ಕೆಲಸ ಕೊಡಿಸಿ ಎಂದು ವಿಶೇಷ ಚೇತನ ನವ್ಯಶ್ರೀ ಜನಸ್ಪಂದನದಲ್ಲಿ ತಮ್ಮ ಸಮಸ್ಯೆ ತೋಡಿಕೊಂಡಿದ್ದರು.

ಈಕೆಯ ಮನವಿ ಸ್ವೀಕಾರ ಮಾಡಿದ ಸಿಎಂ ಸಿದ್ದರಾಮಯ್ಯ ಉದ್ಯೋಗ ಮೇಳದ ವೇಳೆ ಈ ಅರ್ಜಿಯನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಹಾಗೆ ಶಾಂಭವಿ ಮಗುವಿಗೆ ಕಿವಿ ಸಮಸ್ಯೆ ವಿಚಾರವಾಗಿ ಸ್ಥಳದಲ್ಲೆ 50 ಸಾವಿರ ಮಂಜೂರು ಮಾಡಿದ್ದು ಸಿಎಂ ಪರಿಹಾರ‌ ನಿಧಿಯಿಂದ ಸಿದ್ದರಾಮಯ್ಯರಿಂದ ಮಂಜೂರಾತಿ ಮಾಡಲಾಗಿದೆ. ಹಾಗೆ ಬಸನಗೌಡ್ ಬಿರಾದರ್ ಎಂಬುವವರಿಗೆ ಬೋನ್ ಮ್ಯಾರೋ ಚಿಕಿತ್ಸೆಗೆ ಸ್ಥಳದಲ್ಲೆ 4 ಲಕ್ಷ ರೂಪಾಯಿ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!