ರನ್ನ, ಬಿಂದಾಸ್, ಅಣ್ಣಯ್ಯ ಮುಂತಾದ ಹಲವು ಜನಪ್ರಿಯ ಕನ್ನಡ ಚಿತ್ರಗಳ ನಿರ್ಮಾಪಕ ಚಂದ್ರಶೇಖರ್ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
23 ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದರ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಸೆಂಟರ್ ಗೆ ದಾಖಲಿಸಲಾಗಿತ್ತು.
ಕೋವಿಡ್ ನಿಂದ ಚೇತರಿಸಿಕೊಂಡಿದ್ದ ಅವರಿಗೆ ಇದ್ದಕ್ಕಿದ್ದಂತೆ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡು, ಗುರುವಾರ ಮುಂಜಾನೆ ಸುಮಾರು 3-4 ಗಂಟೆ ಸಮಯದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಚಂದ್ರಶೇಖರ್ ಅವರು ಇತ್ತೀಚೆಗಷ್ಟೇ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ಅವರೊಂದಿಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಇದಕ್ಕೂ ಮುನ್ನ ಏನೋ ಒಂಥರಾ, ಅಣ್ಣಯ್ಯ, ರನ್ನ, ಬಿಂದಾಸ್ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳನ್ನು ತಮ್ಮ ನಿಮಿಷಾಂಬ ಕಂಬೈನ್ಸ್ ಮೂಲಕ ನಿರ್ಮಿಸಿದ್ದರು.
ಇತ್ತೀಚೆಗಷ್ಟೇ ಕೋಟಿ ನಿರ್ಮಾಪಕ ರಾಮು ನಿಧನದ ಬೆನ್ನಲ್ಲೇ ಮತ್ತೊಬ್ಬ ನಿರ್ಮಾಪಕನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ.