ಚಾಮರಾಜನಗರ : ಸರ್ಕಾರಕ್ಕೆ ಕೊರೊನಾ ಬಂದು ಐಸಿಯುನಲ್ಲಿದೆ, ಅದಕ್ಕೆ ಆಮ್ಲಜನಕವಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ .
ಚಾಮರಾಜನಗರಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವುದು ಸಾವುಗಳಲ್ಲ ಇದೊಂದು ಕೊಲೆ. ಸರ್ಕಾರವೇ ಮಾಡಿರುವ ಮರ್ಡರ್. 24 ಮಂದಿಯಲ್ಲ 28 ಮಂದಿ ಮೃತಪಟ್ಟಿದ್ದಾರೆ, ಅದಕ್ಕೆ ದಾಖಲೆಗಳಿವೆ, ವೈದ್ಯರು ನೇರವಾಗಿ ಇದನ್ನು ಒಪ್ಪಿಕೊಂಡಿದ್ದಾರೆ
24 ಮಂದಿಯೂ ರಾತ್ರಿ ವೇಳೆಯೇ ಮೃತಪಟ್ಟಿದ್ದು ಆಮ್ಲಜನಕ ಕೊರತೆಯಿಂದಲೇ ಅಸುನೀಗಿದ್ದಾರೆ. ಕಾಂಗ್ರೆಸ್ ಶಾಸಕರು ಕೂಡ ಆಮ್ಲಜನಕ ಕೊರತೆ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ಕೊಟ್ಟರೂ ಸಮಸ್ಯೆ ಬಗೆಹರಿದಿಲ್ಲ. ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ರಾಜ್ಯಸರ್ಕಾರದ ವಿರುದ್ದ ಡಿಕೆಶಿವಕುಮಾರ್ ಕಿಡಿಕಾರಿದರು.
ಜನರನ್ನು ಕೊಂದಿರುವ ಈ ಘಟನೆ ನ್ಯಾಯಾಂಗ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು, ಅಧಿಕಾರಿಗಳ ವಿರುದ್ಧ ಸುಮೊಟೊ ಕೇಸ್ ದಾಖಲಿಸಬೇಕು, ರಾಜ್ಯಾದ್ಯಂತ ಆಮ್ಲಜನಕ ಸಮಸ್ಯೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.