ಶಂಕನಾದ ಅರವಿಂದ್ ಎಂದೇ ಹೆಸರಾಗಿದ್ದ ನಟ, ನಿರ್ಮಾಪಕ ಕೋವಿಡ್ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ 2 ದಿನದಲ್ಲೇ ಮೃತಪಟ್ಟಿದ್ದಾರೆ.
ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶಂಕನಾದ ಅರವಿಂದ್ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಶುಕ್ರವಾರ ಮಧ್ಯಾಹ್ನ ಉಸಿರಾಟದ ಸಮಸ್ಯೆಯಿಂದ ಕೊನೆಯುಸಿರೆಳೆದರು. ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದ ಅರವಿಂದ್ ಅವರು ಶಂಕನಾದ ಚಿತ್ರದಲ್ಲಿ ನೀಡಿದ್ದ ಅಭಿನಯದಿಂದ ಜನಪ್ರಿಯರಾಗಿದ್ದರು. ಬೆಟ್ಟದ ಹೂವು ಅವರಿಗೆ ಭಾರೀ ಹೆಸರು ತಂದುಕೊಟ್ಟ ಮತ್ತೊಂದು ಚಿತ್ರ. ದಿವಂಗತ ಕಾಶಿನಾಥ್‌ಗೆ ಆಪ್ತರಾಗಿದ್ದ ಶಂಕನಾದ ಅರವಿಂದ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.