ಕೋವಿಡ್ ಸೋಂಕಿನಿಂದ ಮೃತಪಟ್ಟ ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಬೆಂಗಳೂರು ದಕ್ಷಿಣ ವಿಭಾಗದ ತಹಸೀಲ್ದಾರ್ ಮಾನವೀಯತೆ ಮೆರೆದಿದ್ದಾರೆ.
ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ ಸಂಬಂಧಿಕರು ಮತ್ತು ಕುಟುಂಬಸ್ಥರೇ ಹಿಂದೇಟು ಹಾಕುತ್ತಿರುವಾಗ ತಾವರೆಕೆರೆ ಚಿತಾಗಾರದಲ್ಲಿ 20ಕ್ಕೂ ಹೆಚ್ಚು ಅನಾಥ ಶವಗಳಿಗೆ ತಹಸೀಲ್ದಾರ್ ಅಗ್ನಿ ಸ್ಪರ್ಶ ಮಾಡಿದ್ದಾರೆ.
ತಹಸೀಲ್ದಾರ್ ಶಿವಪ್ಪ ಲಮಾಣಿ ತಾವೇ ಖುದ್ದು ನಿಂತು ಅನಾಥ ಶವಗಳ ಚಿತೆಗಳಿಗೆ ಅಗ್ನಿಸ್ಪರ್ಶ ಮಾಡಿ ಇತರೆ ಸರ್ಕಾರಿ ಅಧಿಕಾರಿಗಳಿಗೆ ಮಾದರಿಯಾದ್ದಾರೆ.
20 ವರ್ಷಗಳಿಂದ ಸರಕಾರಿ ಸೇವೆ ಸಲ್ಲಿಸುತ್ತಿರುವ ಶಿವಪ್ಪ ಲಮಾಣಿ ಬೆಂಗಳೂರು ದಕ್ಷಿಣ ವಿಭಾಗದ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾವರೆಕೆರೆ ಚಿತಾಗಾರದ ಉಸ್ತುವಾರಿ ವಹಿಸಿಕೊಂಡಿರುವ ಕೆ.ಎ.ಎಸ್ ಅಧಿಕಾರಿ ಶಿವಪ್ಪ ಲಮಾಣಿ ಕರ್ತವ್ಯದ ಜೊತೆ ಮಾನವೀಯತೆ ತೋರಿ ಆದರ್ಶಪ್ರಾಯರಾಗಿದ್ದಾರೆ.