ಕೊರೊನಾ ವೈರಸ್ ಮಾಧ್ಯಮ ಕ್ಷೇತ್ರ ತತ್ತರಿಸಿದ್ದು, ಸುಮಾರು 300 ಪತ್ರಕರ್ತರನ್ನು ಇದುವರೆಗೆ ಬಲಿ ಪಡೆದಿದೆ.
ಕೊರೊನಾ ವೈರಸ್ ಕಾಲಿಟ್ಟಾಗಿನಿಂದ ಪ್ರತಿನಿತ್ಯ ಪತ್ರಕರ್ತರು ಕೊರೊನಾ ಮಹಾಮಾರಿಯಿಂದ ಒಂದಲ್ಲ ಒಂದು ರೀತಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ದೇಶದಲ್ಲಿ 2021ರ ಏಪ್ರಿಲ್ ನಲ್ಲಿ ಪ್ರತಿನಿತ್ಯ ಮೂವರು ಪತ್ರಕರ್ತರು ಬಲಿಯಾಗುತ್ತಿದ್ದರು. ಆದರೆ ಮೇ ತಿಂಗಳಲ್ಲಿ ಈ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಕೋವಿಡ್ ಎರಡನೇ ಅಲೆಗೆ ಕೇವಲ ಹಿರಿಯ ಪತ್ರಕರ್ತರು ಮಾತ್ರವಲ್ಲ, ಜಿಲ್ಲಾ ಮಟ್ಟದ ಪತ್ರಕರ್ತರು ಹಾಗೂ ಕ್ಯಾಮರಾಮನ್ ಸೇರಿದಂತೆ ಹಲವರನ್ನು ಬಲಿ ಪಡೆದಿದೆ.
ದೆಹಲಿ ಮೂಲದ ಇನ್ಸಿಟಿಟ್ಯೂಟ್ ಆಫ್ ಪರ್ಸಪ್ಷನ್ ಸ್ಟಡೀಸ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಮೇ 16ರ ವೇಳೆಗೆ ದೇಶದಲ್ಲಿ 2020ರ ಏಪ್ರಿಲ್ ನಿಂದ ಮೇ 2021ರ ಅವಧಿಯಲ್ಲಿ ಕೋವಿಡ್ ಗೆ 238 ಪತ್ರಕರ್ತರು ಮೃತಪಟ್ಟಿದ್ದಾರೆ.
2020ರ ಡಿಸೆಂಬರ್ ನಲ್ಲಿ ಅತೀ ಹೆಚ್ಚು 58 ಮಂದಿ ಪತ್ರಕರ್ತರು ಅಸುನೀಗಿದ್ದರು. ಎರಡನೇ ಅಲೆಗೆ ಕೇವಲ 2 ತಿಂಗಳಲ್ಲಿ 171 ಪತ್ರಕರ್ತರು ಅಸುನೀಗಿದ್ದಾರೆ. ಉಳಿದ 11 ಮಂದಿ ಜನವರಿ ಮತ್ತು ಏಪ್ರಿಲ್ ನಡುವೆ ಮೃತಪಟ್ಟಿದ್ದಾರೆ.