ಬೆಂಗಳೂರು: ಕೋವಿಡ್ ಸಂಬಂಧಿತ ಔಷಧಿಗಳ ಮಾರಾಟ ಮಾಡುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಇಬ್ಬರು ಆಫ್ರಿಕನ್ ಪ್ರಜೆಗಳನ್ನು
ಕೇಂದ್ರ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಇಸ್ಮಾಯಿಲ್ ಖಾದ್ರಿ ಹಾಗೂ ಅಳದೆ ಅಬ್ದುಲ್ಲಾ ಯೂಸುಫ್ ಬಂಧಿತರು.
ನಕಲಿ ಮೆಡಿಕಲ್ ಕಂಪನಿ ಹೆಸರಿನಲ್ಲಿ ಸಾರ್ವಜನಿಕರನ್ನ ಸಂಪರ್ಕಿಸುತ್ತಿದ್ದ ಇವರಿಬ್ಬರು ರೆಮ್ಡಿಸಿವೀರ್ ಹಾಗೂ ಮತ್ತಿತರ ಔಷಧಿಗಳನ್ನ ನೀಡುವುದಾಗಿ ಹಣ ಪಡೆಯುತ್ತಿದ್ದರು. ಅಲ್ಲದೇ ಅಬ್ಧುಲ್ಲಾ ಯೂಸುಫ್ ಸಾರ್ವಜನಿಕರನ್ನ ಸಂಪರ್ಕಿಸಿ ವ್ಯವಹರಿಸುತ್ತಿದ್ರೆ, ಮೊಹಮ್ಮದ್ ಇಸ್ಮಾಯಿಲ್ ಕೃತ್ಯಕ್ಕೆ ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳನ್ನ ಒದಗಿಸುತ್ತಿದ್ದ.
ಆರೋಪಿಗಳ ವಿರುದ್ಧ ಬೆಂಗಳೂರಿನ ವಿವಿಧ ಸಿಇಎನ್ ಠಾಣೆ ಹಾಗೂ ಬೀದರ್ ನಲ್ಲಿ ಪ್ರಕರಣ ದಾಖಲಾಗಿದ್ದವು. ಆರೋಪಿಗಳಿಂದ 4 ಮೊಬೈಲ್ಗಳು, 1 ಹಾರ್ಡ್ ಡಿಸ್ಕ್, 110 ಸಿಮ್ ಕಾರ್ಡ್ ಹಾಗೂ 4 ಲಕ್ಷ ಸಹಿತ 10 ಬ್ಯಾಂಕ್ ಅಕೌಂಟ್ಗಳನ್ನ ಜಪ್ತಿ ಮಾಡಿ ತನಿಖೆ ನಡೆಸುತ್ತಿದ್ದಾರೆ.