ಆಕ್ಸಿಜನ್ ಕೊರತೆಯಿಂದ 24 ಕೊರೊನಾ ಸೋಂಕಿತರ ದುರಂತ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ವಿ. ರವಿ ಅವರನ್ನು ರಾಜ್ಯ ಸರಕಾರ ಎತ್ತಂಗಡಿ ಮಾಡಿದೆ.
ಕಳೆದ ತಿಂಗಳು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಬಗ್ಗೆ ಹೈಕೋರ್ಟ್ ನಿಯೋಜಿಸಿದ್ದ ನಿವೃತ್ತ ನ್ಯಾಯಮೂರ್ತಿ ಎ.ಎನ್. ನಾರಾಯಣಗೌಡ ನೇತೃತ್ವದ ಸಮಿತಿ ನೀಡಿದ ವರದಿ ಹಿನ್ನೆಲೆಯಲ್ಲಿ ಡಾ.ಎಂ.ವಿ. ರವಿ ಅವರನ್ನು ಚಾಮರಾಜನಗರದಿಂದ ವರ್ಗ ಮಾಡಿರುವ ರಾಜ್ಯ ಸರಕಾರ ಯಾವುದೇ ಜಾಗ ತೋರಿಸಿಲ್ಲ.
ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಸತೀಶ್ ಅವರನ್ನು ನೇಮಕ ಮಾಡಿದೆ.