ಜ್ವರದಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ಕೊಡಿಲು ಮಗಳನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗಾಗಿ 8 ಕಿ.ಮೀ. ಅಲೆದಾಡಿದ ಹೃದಯವಿದ್ರಾವಕ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜ್ವರದಿಂದ ಬಳಲುತ್ತಿದ್ದ ಪುತ್ರಿ ಅನುಶಾಳನ್ನು ಹೆಗಲ ಮೇಲೆ ಹೊತ್ತುಕೊಂಡು ತಂದೆ ಮರೆಪ್ಪ ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದಿಂದ 8 ಕಿ.ಮೀ. ದೂರದ ಜಿಲ್ಲಾ ಕೇಂದ್ರಕ್ಕೆ ಬಂದಿದ್ದಾರೆ.
ಯಾದಗಿರಿಯಲ್ಲಿ ನಿನ್ನೆಯಿಂದ 4 ದಿನಗಳ ಕಾಲ ಕಠಿಣ ಲಾಕ್ ಡೌನ್ ಜಾರಿ ಮಾಡಿದ ಹಿನ್ನೆಲೆ ಪಗಲಾಪುರ ಗ್ರಾಮದಿಂದ ಮರೆಪ್ಪ 8 ಕಿ.ಮೀ. ದೂರದವರೆಗೆ ಮಗಳನ್ನು ಹೊತ್ತುಕೊಂಡು ಬಂದಿದ್ದಾರೆ.
ಪೊಲೀಸರು ವಾಹನಗಳ ಸೀಜ್ ಮಾಡುತ್ತಾರೆಂದು ಹೆದರಿ ಬೈಕ್ ಬಿಟ್ಟು ನಡೆದುಕೊಂಡು ತಂದೆ ನಡೆದುಕೊಂಡು ಬಂದಿದ್ದಾರೆ. ನಂತರ ಯಾದಗಿರಿ ನಗರದ ಖಾಸಗಿ ಆಸ್ಪತ್ರೆಗೆ ಮಗಳನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.