ಮಂಡ್ಯ : ಅತ್ಯಾಚಾರ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ರಣಾವತ್ ಬಾಡಿಗಾರ್ಡ್ ಕುಮಾರ್ ಹೆಗ್ಡೆಯನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಹೆಗ್ಗದಹಳ್ಳಿಯಲ್ಲಿ ಕುಮಾರ್ ಹೆಗ್ಡೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಕುಮಾರ್ ಹೆಗ್ಡೆ ವಿರುದ್ಧ ಮುಂಬೈನ ಅಂಧೇರಿ ಮೂಲದ ಬ್ಯೂಟಿಷಿಯನ್ ಅತ್ಯಾಚಾರ ಮತ್ತು ವಂಚನೆ ಆರೋಪ ಮಾಡಿದ್ದರು. ಕುಮಾರ್ ವಿರುದ್ಧ ಮುಂಬೈನ ಡಿಎನ್ ನಗರದ ಪೊಲೀಸ್ ಸ್ಟೇಷನ್ ನಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ಯುವತಿ ಆರೋಪ ಮಾಡಿದ್ದರು. ಕುಮಾರ್ ಮುಂಬೈ ತೊರೆದು ಕರ್ನಾಟಕಕ್ಕೆ ಬಂದು ತಲೆಮರೆಸಿಕೊಂಡಿದ್ದ.
.