ಕೋವಿಡ್ ಸಂತ್ರಸ್ತರ ನೆರವಿಗೆ ಮಿಡಿದ ಬಾಲಕನೊಬ್ಬ 4 ವರ್ಷಗಳಿಂದ ಕೂಡಿದ್ದ ಹಣವನ್ನು ದೇಣಿಗೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾನೆ.
ಬೆಂಗಳೂರಿನ ಹೆಸರಘಟ್ಟ ಎಂಇಐ ನಿವಾಸಿ ಹಿರಿಯ ಸರ್ವೆಯರ್ ಅಭಿನಂದನ್ ಜೈನ್ ಅವರ ಪುತ್ರ ಮಾಯಾಂಕ್ ಜೈನ್ ಜಿಲ್ಲಾಧಿಕಾರಿಗೆ ಹಣ ಹಸ್ತಾಂತರಿಸಿದ್ದಾನೆ.
ಅಪ್ಪ-ಅಮ್ಮ ಕೊಟ್ಟ ಪಾಕೆಟ್ ಮನಿಯಿಂದ 4 ವರ್ಷಗಳಿಂದ ಕೂಡಿಟ್ಟು ಸಂಗ್ರಹಿಸಿದ 4,190 ರೂ. ಮೊತ್ತವನ್ನು ಮಾಯಾಂಕ್ ಜೈನ್ ದೇಣಿಗೆಯಾಗಿ ನೀಡಿದ್ದಾನೆ. ಮಾಯಾಂಕ್ ಅವರ ಕಾರ್ಯಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.