ಹುಕ್ಕಾ ಬಾರ್‌ಗೆ ಪೊಲೀಸರು ದಾಳಿ ನಡೆಸಿ ಅಂಗಡಿ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಮಂಗಳೂರಿನ ವೆಲೆನ್ಸಿಯಾ ರಸ್ತೆಯಲ್ಲಿ ನಡೆದಿದೆ.
ಹುಸೈನ್ ಸಾಹಿಲ್ ಹಾಗೂ ಮುಹಮ್ಮದ್ ಸಿರಾಜುದ್ದೀನ್ ಎಂಬವರ ಹೆಸರಿನಲ್ಲಿ ಕ್ಲೌಡ್ ಶಿಶಾ ಕೆಫೆಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ಪರವಾನಿಗೆ ಪಡೆದಿದ್ದರು. ಮಾರ್ಚ್ 31ಕ್ಕೆ ಇದರ ಪರವಾನಿಗೆಯ ಅವಧಿ ಮುಗಿದಿತ್ತು. ಆದರೆ ನವೀಕರಿಸಲಿಲ್ಲ. ಇದು ಪೊಲೀಸರ ದಾಳಿಯ ವೇಳೆ ಗಮನಕ್ಕೆ ಬಂದಿದೆ. ಕೆಫೆಯ ಮುಂಬಾಗಿಲು ಹಾಕಿ ಕಾರ್ಯಾಚರಿಸಲಾಗುತ್ತಿತ್ತು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಿಂಬಾಗಿಲ ಮೂಲಕ ದಾಳಿ ಮಾಡಿದಾಗ ಹಲವು ಮಂದಿ ಹುಕ್ಕಾ ಸೇದುತ್ತಿರುವುದು ಕಂಡು ಬಂದಿದೆ. ಲಾಕ್‌ಡೌನ್
ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ತಡೆ ಕಾಯೆಯಡಿ ಪಾಂಡೇಶರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.