ಕೊರೊನಾ ವೈರಸ್ ಎರಡನೇ ಅಲೆಯ ಅಬ್ಬರದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಸಿನಿಮಾ ಥಿಯೇಟರ್ ತೆರೆಯಲು ರಾಜ್ಯ ಸರಕಾರ ಅನುಮತಿ ನೀಡಿದೆ. ಈ ಮೂಲಕ ಸಿನಿ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ.
ಕೊರೊನಾ ಅಬ್ಬರ ಇಳಿಕೆ ಕಂಡ ಹಿನ್ನೆಲೆಯಲ್ಲಿ ನಾಳೆಯಿಂದಲೇ ಅಂದರೆ ಸೋಮವಾರದಿಂದ ಶೇ.50ರಷ್ಟು ಸಿನಿಮಾ ಥಿಯೇಟರ್ ತೆರೆಯಲು ರಾಜಯ ಸರಕಾರ ಅನುಮತಿ ನೀಡಿದೆ. ಇದರಿಂದ 3 ತಿಂಗಳ ಬಳಿಕ ಸಿನಿಮಾ ಥಿಯೇಟರ್ ತೆರೆಯಲು ಅವಕಾಶ ಲಭಿಸಿದಂತಾಗಿದೆ.
ಇದೇ ವೇಳೆ ನೈಟ್ ಕರ್ಫ್ಯೂ ಅವಧಿಯಲ್ಲೂ ಬದಲಾವಣೆ ಮಾಡಲಾಗಿದ್ದು, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ರವರೆಗೆ ಜಾರಿಯಲ್ಲಿರುತ್ತದೆ. ಈ ಹಿಂದೆ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿತ್ತು.