ಬ್ಲೂ ಟೂಥ್ ಹೆಡ್ ಫೋನ್ ಸ್ಫೋಟಗೊಂಡ ಪರಿಣಾಮ 15 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ರಾಜಸ್ಥಾನದಲ್ಲಿ ಸಂಭವಿಸಿದೆ.
ಜೈಪುರದ ಚೂಮು ಪ್ರದೇಶದ ಉದಯ್ ಪುರಿಯ ನಿವಾಸಿ ರಾಕೇಶ್ ನಗರ್ ಮೃತಪಟ್ಟ ದುರ್ದೈವಿ.
ರಾಕೇಶ್ ಸ್ನೇಹಿತನ ಜೊತೆ ಮಾತನಾಡುತ್ತಿದ್ದಾಗ ಬ್ಲೂ ಟೂತ್ ಹಾಕಿಕೊಂಡು ಸ್ಫೋಟಗೊಂಡು ಮೃತಪಟ್ಟಿದ್ದಾನೆ. ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.
ಸ್ಫೋಟದ ತೀವ್ರತೆಗೆ ಬಾಲಕನ ಕಿವಿಗಳು ಹಾನಿಯಾಗಿದ್ದು, ದೇಶದಲ್ಲಿ ಇದೇ ಮೊದಲ ಬಾರಿ ಈ ರೀತಿಯ ದುರ್ಘಟನೆ ನಡೆದಿದೆ ಎಂದು ವೈದ್ಯರು ತಿಳಿಸಿದ್ದಾರೆ.