ಅದ್ಭುತ ಪ್ರದರ್ಶನ ನೀಡಿದ ಬಜರಂಗ್ ಪೂನಿಯಾ ಕುಸ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ 6ನೇ ಪದಕ ವಶಪಡಿಸಿಕೊಂಡಿದೆ.
ಶನಿವಾರ ನಡೆದ 65 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ತಾಂತ್ರಿಕ ನೈಪುಣ್ಯತೆ ಪ್ರದರ್ಶಿಸಿದ ಬಜರಂಗ್ ಪೂನಿಯಾ 8-0 ಅಂಕಗಳಿಂದ ಖಜಕಿಸ್ತಾನದ ಡೌಲೆಟ್ ನಿಯಾಜ್ ಬೆಕೊವ್ ಅವರನ್ನು ಸೋಲಿಸಿದರು.
ಬಜರಂಗ್ ಪೂನಿಯಾ ಸಾಧನೆಯೊಂದಿಗೆ ಭಾರತ ಒಲಿಂಪಿಕ್ಸ್ ನಲ್ಲಿ 2 ಬೆಳ್ಳಿ ಹಾಗೂ 4 ಕಂಚಿನ ಪದಕದೊಂದಿಗೆ ಒಟ್ಟಾರೆ 6 ಪದಕ ಗೆದ್ದಂತಾಗಿದೆ. 27 ವರ್ಷದ ಪೂನಿಯಾ ಈ ಬಾರಿ ಕುಸ್ತಿಯಲ್ಲಿ ಭಾರತಕ್ಕೆ 2ನೇ ಪದಕ ಗೆದ್ದಂತಾಗಿದೆ.