ವೀಕೆಂಡ್ ಗಳಲ್ಲಿ ಮಾತ್ರ ಸಂಚರಿಸುವ ತೇಜಸ್ ರೈಲುಗಳು ತಡವಾಗಿ ತಲುಪಿದ ಕಾರಣ 2035 ಪ್ರಯಾಣಿಕರಿಗೆ ದಂಡ ಪಾವತಿಸುವುದಾಗಿ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಪ್ರಕಟಿಸಿದೆ.
ದೆಹಲಿಯಲ್ಲಿ ಸಿಗ್ನಲ್ ಸಮಸ್ಯೆಯಿಂದಾಗಿ ಶನಿವಾರ ಮತ್ತು ಭಾನುವಾರ ಸಂಚರಿಸುವ ತೇಜಸ್ ರೈಲು ಸುಮಾರು ಎರಡೂವರೆ ಗಂಟೆ ತಡವಾಗಿ ನಿಲ್ದಾಣ ತಲುಪಿತ್ತು.
ಎರಡು ದಿನ ರೈಲುಗಳು ತಡವಾಗಿ ತಲುಪಿದ್ದರಿಂದ ಎರಡು ದಿನ ರೈಲಿನಲ್ಲಿ ಸಂಚರಿಸಿದ ಸುಮಾರು 2035 ಪ್ರಯಾಣಿಕರಿಗೆ 4 ಲಕ್ಷ ರೂ. ದಂಡ ಪಾವತಿಸುವುದಾಗಿ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ತೇಜಸ್ ರೈಲು ಪ್ರಯಾಣಿಕರು ತಡವಾಗಿ ಪ್ರಯಾಣ ಆದರೆ ಗಂಟೆಗೆ 100ರೂ.ನಂತೆ ದಂಡದ ಮೊತ್ತ ಪಡೆಯಬಹುದಾಗಿದೆ. ಎರಡು ಗಂಟೆ ತಡವಾದರೆ 250 ರೂ. ದಂಡವನ್ನು ಇಲಾಖೆ ಪಾವತಿಸಲಿದೆ.