ನನಗೆ ಈಗಾಗಲೇ ಮದುವೆ ಆಗಿದೆ. ಆದ್ದರಿಂದ ಸಂಬಂಧ ಮುಂದುವರಿಸುವುದು ಬೇಡ ಎಂದು ಹೇಳಿದ್ದಕ್ಕೆ ಪ್ರೇಯಸಿಯನ್ನೇ ಕೊಂದು ಕಟ್ಟಡದಿಂದ ಬಿದ್ದಿದ್ದಾಳೆ ಎಂದು ಪ್ರಿಯಕರ ಕತೆ ಕಟ್ಟಿದ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಅನಿತಾ ಕೊಲೆಯಾದ ದುರ್ದೈವಿ. ವೆಂಕಟೇಶ್ (27) ಕೊಲೆ ಮಾಡಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಈಗ ಪೊಲೀಸರ ವಶದಲ್ಲಿದ್ದಾನೆ.
ಬಾಲ್ಯದಲ್ಲೇ ಮದುವೆ ಆಗಿ ಗಂಡನನ್ನ ಬಿಟ್ಟು ಬಂದಿದ್ದ ಅನಿತಾ ಮತ್ತು ವೆಂಕಟೇಶ್ ಇಬ್ಬರೂ ಮೆಡಿಸಿನ್ ಪೂರೈಸುವ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ನಂತರ ಪ್ರೇಮಕ್ಕೆ ತಿರುಗಿತ್ತು.
ಎರಡು ವರ್ಷದಿಂದ ಅನಿತಾ ಮತ್ತು ವೆಂಕಟೇಶ್ ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚೆಗೆ ವೆಂಕಟೇಶ್ ನಿಂದ ದೂರವಾಗಲು ಅನಿತಾ ನಿರ್ಧರಿಸಿದ್ದಳು.
ಈಗಾಗಲೇ ನನಗೆ ಮತ್ತೊಂದು ಮದುವೆ ಆಗಿದೆ. ನನ್ನ ಬಿಟ್ಟುಬಿಡು ಎಂದು ಅನಿತಾ ಹೇಳಿದ್ದಳು.ಇದರಿಂದ ಕೋಪಗೊಂಡ ವೆಂಕಟೇಶ್ ನಿಂದ ಅನಿತಾ ಕೊಲೆ ಮಾಡಿದ್ದ. ಬೆಳಗ್ಗೆ ಕೊಲೆ ಮಾಡಿ ತಾನೆ ಆಸ್ಪತ್ರೆಗೆ ಸೇರಿಸಿದ್ದ ವೆಂಕಟೇಶ್, ಕಟ್ಟಡದಿಂದ ಬಿದ್ದಿದ್ದಾಳೆ ಎಂದು ಡ್ರಾಮಾ ಮಾಡಿದ್ದ. ಅನುಮಾನಗೊಂಡ ಸ್ಥಳೀಯರು ವೆಂಕಟೇಶ್ ನನ್ನು ಕೂಡಿ ಹಾಕಿ ಪೊಲೀಸರ ವಶಕ್ಕೆ ಒಪ್ಪಿಸಿದರು. ಠಾಣೆಗೆ ಕರೆತಂದು ವಿಚಾರಿಸಿದಾಗ ಕೊಲೆ ಅಸಲಿ ವಿಚಾರ ಬಯಲಾಗಿದೆ.