ಕೊರೊನಾ ಮೂರನೇ ಅಲೆಯಿಂದ ತತ್ತರಿಸಿರುವ ಕೇರಳ ರಾಜ್ಯದಲ್ಲಿ ಇದೀಗ ನಿಫಾ ವೈರಸ್ ಕಾಣಿಸಿಕೊಂಡಿದ್ದು, ಕೋಜಿಕೋಡ್ ನಲ್ಲಿ 12 ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ.
ಸೆಪ್ಟೆಂಬರ್ 3ರಂದು ಬಾಲಕನಿಗೆ ನಿಫಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅಂದಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ನಿನ್ನೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾನೆ.
ಪುಣೆಯ ವೈರಾಲಜಿ ಲ್ಯಾಬ್ ಗೆ ಬಾಲಕನ ಮಾದರಿ ಕಳುಹಿಸಲಾಗಿದ್ದು, ಅಲ್ಲಿಯೂ ನಿಫಾ ಸೋಂಕು ಎಂದು ದೃಢಪಟ್ಟಿತ್ತು.