ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧ ಮರ ಕಡಿಯುತ್ತಿದ್ದವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಫೈರಿಂಗ್ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಸೋಮವಾರ ಸಂಜೆ 12 ಜನರ ತಂಡವೊಂದು ಶ್ರೀಗಂಧದ ಮರ ಕಡಿಯಲು ಯತ್ನ ನಡೆಸಿತ್ತು. ಈ ವೇಳೆ ಕಳ್ಳರ ತಂಡವನ್ನು ಸುತ್ತುವರೆದ ಫಾರೆಸ್ಟ್ ಗಾರ್ಡ್ಗಳು ಶರಣಾಗಲು ಸೂಚಿಸಿದರೂ ಶ್ರೀಗಂಧ ಚೊರರು ಗಾರ್ಡ್ಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು.
ಈ ವೇಳೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿ ಮೂರ್ತಿ, ಕೃಷ್ಣ ಮತ್ತು ಮಲ್ಲಪ್ಪ ಎಂಬ ಮೂವರು ಶ್ರೀಗಂಧ ಕಳ್ಳರನ್ನು ಬಂಧಿಸಿದ್ದಾರೆ. ಗುಂಡು ಹಾರಿಸಿದಾಗ ಗಾಯಗೊಂಡಿದ್ದ ಮೂವರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.