ಬ್ರಿಟನ್ ನ 18 ವರ್ಷದ ಯುವತಿ ಎಮ್ಮಾ ರಾಡುಕಾನು ಯುಎಸ್ ಓಪನ್ ಚಾಂಪಿಯನ್ ಆಗುವ ಮೂಲಕ ಅರ್ಹತಾ ಸುತ್ತಿನಿಂದ ಬಂದು ಪ್ರಶಸ್ತಿ ಗೆದ್ದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಶನಿವಾರ ತಡರಾತ್ರಿ ನಡೆದ ವನಿತೆಯರ ಸಿಂಗಲ್ಸ್ ಫೈನಲ್ಸ್ ನಲ್ಲಿ ಎಮ್ಮಾ ರಾಡುಕಾನು 6-4,6-3 ನೇರ ಸೆಟ್ ಗಳಿಂದ 19 ವರ್ಷದ ಲೈಲೆಹ್ ಫೆರ್ನಾಂಡೀಸ್ ಅವರನ್ನು ಸೋಲಿಸಿದರು. ಈ ಮೂಲಕ 44 ವರ್ಷಗಳ ನಂತರ ಗ್ರ್ಯಾನ್ ಸ್ಲಾಮ್ ಗೆದ್ದ ಮೊದಲ ಬ್ರಿಟನ್ ಮಹಿಳೆ ಎನಿಸಿಕೊಂಡರು. ಅಲ್ಲದೇ 2004ಲ್ಲಿ ಮರಿಯಾ ಶರಪೋವಾ ನಂತರ ಗ್ರ್ಯಾನ್ ಸ್ಲಾಮ್ ಗೆದ್ದ ಅತಿ ಕಿರಿಯ ಮಹಿಳೆ ಎಂಬ ಮತ್ತೊಂದು ದಾಖಲೆ ಬರೆದರು.