ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಟಿ-20 ಪಂದ್ಯದ ಎರಡನೇ ಹಂತದ ಪಂದ್ಯದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆಯುವ ಅವಕಾಶ ಹೊಂದಿದ್ದಾರೆ.
ರೋಹಿತ್ ಶರ್ಮಗೆ ಐಪಿಎಲ್ ನಲ್ಲಿ 400 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಬರೆಯಲು ಕೇವಲ 3 ಸಿಕ್ಸರ್ ಗಳ ಅವಶ್ಯಕತೆ ಇದೆ. ಆ ಮೂರು ಸಿಕ್ಸರ್ ಗಳನ್ನು ಇದೇ ಪಂದ್ಯದಲ್ಲಿ ಸಿಡಿಸಿ ದಾಖಲೆ ಬರೆಯುವರೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಪ್ರಸ್ತುತ ಐಪಿಎಲ್ ನಲ್ಲಿ 300ಕ್ಕಿಂತ ಅಧಿಕ ಸಿಕ್ಸರ್ ಬಾರಿಸಿದವರಲ್ಲಿ ನಾಲ್ವರು ಭಾರತೀಯರು ಇದ್ದಾರೆ. ಆದರೆ 397 ಸಿಕ್ಸ್ ಬಾರಿಸಿರುವ ರೋಹಿತ್ ಮೊದಲ ಸ್ಥಾನದಲ್ಲಿದ್ದಾರೆ. ಸುರೇಶ್ ರೈನಾ 324 ಸಿಕ್ಸರ್ ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ 315 ಸಿಕ್ಸರ್ ನೊಂದಿಗೆ 3ನೇ ಸ್ಥಾನದಲ್ಲಿದ್ದರೆ ಧೋನಿ 303 ಸಿಕ್ಸರ್ ನೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.