ಕಟ್ಟಿಗೆಯಿಂದ ಹೊಡೆದು ಪತ್ನಿ ಮತ್ತು ಮಗಳನ್ನು ಪಾಪಿ ತಂದೆ ಕೊಲೆ ಮಾಡಿದ ಆಘಾತಕಾರಿ ಘಠನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಈಶ್ವರ್ ನಗರದಲ್ಲಿ ನಡೆದಿದೆ.
ದಿಗಂಬರ್ (46) ಎಂಬಾತ ಪತ್ನಿ ಜಗದೀಶ್ವರಿ (35), ಪ್ರಿಯಾಂಕಾ (11) ಅವರನ್ನು ಕೊಲೆಗೈದಿದ್ದಾನೆ.
ಪತ್ನಿ ಶೀಲ ಶಂಕಿಸಿ ದಿಗಂಬರ್ ಮಧ್ಯರಾತ್ರಿ ಮನೆಯಲ್ಲಿ ಕಟ್ಟಿಗೆಯಿಂದ ಹೊಡೆದು ಇಬ್ಬರನ್ನೂ ಕೊಲೆ ಮಾಡಿದ್ದಾನೆ. ಆರೋಪಿ ದಿಗಂಬರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.