ಕರ್ನಾಟಕದ ಆರಂಭಿಕ ಬ್ಯಾಟ್ಸ್ ಮನ್ ಮಯಾಂಕ್ ಅಗರ್ ವಾಲ್ ಮುಂದಿನ ತಂಡಗಳು ನಡೆಯಲಿರುವ ಐಪಿಎಲ್-2022 ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಪಂಜಾಬ್ ಕಿಂಗ್ಸ್ ಐಪಿಎಲ್ ನಲ್ಲಿ ಈ ಬಾರಿ ತಂಡದಲ್ಲಿ ಉಳಿಸಿಕೊಂಡ ಇಬ್ಬರು ಆಟಗಾರರ ಪೈಕಿ ಮಯಾಂಕ್ ಅಗರ್ ವಾಲ್ ಕೂಡ ಒಬ್ಬರಾಗಿದ್ದಾರೆ. ಮಯಾಂಕ್ ತಂಡದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿ 12 ಕೋಟಿ ರೂ. ನಿಗದಿಪಡಿಸಿತ್ತು.
2018ರಿಂದ ಪಂಜಾಬ್ ತಂಡದಲ್ಲಿರುವ ಮಯಾಂಕ್ ಅಗರ್ ವಾಲ್ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇದೀಗ ಪೂರ್ಣ ಪ್ರಮಾಣದ ನಾಯಕರಾಗಿ ತಂಡದ ಸಾರಥ್ಯ ವಹಿಸಲಿದ್ದಾರೆ.