ಕೆಲಸದ ಒತ್ತಡದಿಂದ ಸಿಟ್ಟಿಗೆದ್ದ ಕಾನ್ ಸ್ಟೇಬಲ್ ಬಿಎಸ್ ಎಫ್ ಶಿಬಿರದಲ್ಲಿ ಮನಬಂದಂತೆ ಗುಂಡು ಹಾರಿಸಿದ್ದು, ಇದರಿಂದ ಐವರು ಯೋಧರು ಮೃತಪಟ್ಟ ಆಘಾತಕಾರಿ ಘಟನೆ ಪಂಜಾಬ್ ಅಮೃತಸರದಲ್ಲಿ ನಡೆದಿದೆ.
ಖಾಸಾ ಗ್ರಾಮದಲ್ಲಿ ಭಾನುವಾರ ಈ ದುರ್ಘಟನೆ ನಡೆದಿದ್ದು, ಮಹಾರಾಷ್ಟ್ರ ಮೂಲದ ಬಿಎಸ್ ಎಫ್ ಕಾನ್ ಸ್ಟೇಬಲ್ ಸೆಟ್ಟಪ್ಪ ಬಿಎಸ್ ಎಫ್ ಶಿಬಿರದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ 5 ಮಂದಿಯ ಯೋಧರು ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನ್ ಸ್ಟೇಬಲ್ ಸೆಟ್ಟಪ್ಪಗೆ ಪ್ರತಿನಿತ್ಯ ಕೆಲಸ ವಹಿಸುತ್ತಿದ್ದು, ಕೆಲಸದ ಒತ್ತಡದಿಂದ ಬಳಲುತ್ತಿದ್ದರು. ಶನಿವಾರ ರಾತ್ರಿ ಬಿಎಸ್ ಎಫ್ ಹಿರಿಯ ಅಧಿಕಾರಿ ಜೊತೆ ಈ ಬಗ್ಗೆ ವಾದ ಕೂಡ ಮಾಡಿದ್ದು ಸಿಟ್ಟಿಗೆದ್ದಿದ್ದ. ಭಾನುವಾರ ಕೆಲಸಕ್ಕೆ ಹಾಜರಾಗಿದ್ದ ಸೆಟ್ಟಪ್ಪ ರೈಫಲ್ ನಿಂದ ಗುಂಡು ಹಾರಿಸತೊಡಗಿದ ಎಂದು ಮೂಲಗಳು ತಿಳಿಸಿವೆ.