ಆರ್ಥಿಕ ಅವನತಿಯತ್ತ ಶ್ರೀಲಂಕಾ – ಸಕ್ಕರೆ, ಬೇಳೆಗೆ ಚಿನ್ನದ ಬೆಲೆ – 1 ಕಪ್ ಟೀ ಗೆ 100 ರೂಪಾಯಿ !

ರಾವಣನ ತವರೂರು ಎಂಬ ಖ್ಯಾತಿಯ ಶ್ರೀಲಂಕಾ ಮಹಾ ಆರ್ಥಿಕ ಪತನದತ್ತ ಸಾಗಿದೆ. ದೇಶದಲ್ಲಿ ಆಹಾರ ಉತ್ಪನ್ನಗಳ ಖರೀದಿಗೆ ಹಾಹಾಕಾರ ಶುರುವಾಗಿದೆ. ಸಕ್ಕರೆ ಬೇಳೆ ಸೇರಿದಂತೆ ಪ್ರಮುಖ ಆಹಾರ ಉತ್ಪನ್ನಗಳಿಗೆ ಚಿನ್ನದ ಬೆಲೆ ಆಗಿದೆ.

ಕೋವಿಡ್‌ ಬಿಕ್ಕಟ್ಟಿನಿಂದ ಶ್ರೀಲಂಕಾದ ಪ್ರವಾಸೋದ್ಯಮ ಸೊರಗಿದೆ. ಸರಕಾರದ ವೆಚ್ಚ ಹೆಚ್ಚಳ, ತೆರಿಗೆ ಕಡಿತವೂ ಸೇರಿ ದ್ವೀಪ ರಾಷ್ಟ್ರದ ಆರ್ಥಿಕತೆ ಹದಗೆಟ್ಟಿದ್ದು, ದಿವಾಳಿಯತ್ತ ಸಾಗಿದೆ. ಶ್ರೀಲಂಕಾದಲ್ಲಿ ಜಿಡಿಪಿ ಸೊನ್ನೆ ಸುತ್ತುತ್ತಿದೆ. ಜನ ಪೆಟ್ರೋಲ್ ಸೀಮೆಎಣ್ಣೆಗೆ ಕ್ಯೂ ನಿಲ್ಲುವಂತಾಗಿದೆ. ಕ್ಯೂ ನಿಂತ ಜನ ಸಾವನ್ನಪ್ಪುತ್ತಿದ್ದಾರೆ. ಮುದ್ರಣ ಕಾಗದಲ್ಲಿ ಕೊರತೆ ಉಂಟಾದ ಪರಿಣಾಮ ಶಾಲಾ ಮಕ್ಕಳಿಗೆ ನಡೆಯಬೇಕಾಗಿದ್ದ ಪರೀಕ್ಷೆಯನ್ನ ಸರ್ಕಾರ ಮುಂದೂಡಿದೆ.

2020ರಲ್ಲಿ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತಗೊಂಡಿತ್ತು. ಅಲ್ಲದೆ ವಿದೇಶಿ ವಿನಿಮಯ ಉಳಿಸುವ ಉದ್ದೇಶದಿಂದ ಹಲವು ಅಗತ್ಯ ವಸ್ತುಗಳ ಆಮದಿನ ಮೇಲೆ ಸರ್ಕಾರ ನಿಷೇಧ ಹೇರಿತ್ತು. ಇವೆಲ್ಲದರಿಂದಾಗಿ ಆಹಾರ ಅಭದ್ರತೆ ತಲೆದೋರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಓದಿ :-JOE BIDEN – ಉತ್ತರಾಧಿಕಾರಿಯನ್ನಾಗಿ ಕಮಲಾ ಹ್ಯಾರಿಸ್ರನ್ನ ಯಾಕೆ ಆಯ್ಕೆ ಮಾಡಬೇಕಿತ್ತು?- ಪತಿ ವಿರುದ್ಧ ಜೋ ಬೈಡನ್ ಪತ್ನಿ ಅಸಮಾಧಾನ

ರಷ್ಯಾ- ಉಕ್ರೇನ್ ಯುದ್ಧ ಪರಿಣಾಮ ಶ್ರೀಲಂಕಾದಲ್ಲಿ ತೈಲ ಹಾಹಾಕಾರ ಶುರುವಾಗಿದೆ. ಶ್ರೀಲಂಕಾದಲ್ಲಿ ಕಚ್ಛಾತೈಲ ಸಂಗ್ರಹಗಾರಗಳು ಬರಿದಾಗಿವೆ. ಎಲ್ ಪಿ ಜಿ ಸಿಲಿಂಡರ್ ಬೆಲೆ 1350 ರೂಪಾಯಿಗೆ ಏರಿಕೆ ಕಂಡಿದೆ. ಇನ್ನು ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಒಂದು ಕಪ್ ಟೀ ಬೆಲೆ 100 ರೂಪಾಯಿ ತಲುಪಿದೆ. 400 ಗ್ರಾಂ ಹಾಲಿನ ಪುಡಿಗೆ 250 ರೂಪಾಯಿಯಾಗಿದೆ. ಹಣದುಬ್ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ಏರುತ್ತಿದೆ. ಒಂದೇ ತಿಂಗಳಲ್ಲಿ ಶೇ 19ರಷ್ಟು ಹಣದುಬ್ಬರ ಏರಿಕೆ ಕಂಡಿದೆ. ಫೆಬ್ರವರಿಯಲ್ಲಿ ಶೇ 15.1ರಷ್ಟಿದ್ದ ಹಣದುಬ್ಬರ ಮಾರ್ಚ್ ನಲ್ಲಿ ಶೇ 25.7ಕ್ಕೆ ಏರಿಕೆ ಕಂಡಿದೆ. ಡಾಲರ್ ಮುಂದೆ ಶ್ರೀಲಂಕಾದ ಕರೆನ್ಸಿ ಬೆಲೆ ಮಂಕಾಗಿದ್ದು ಪ್ರತಿ ಡಾಲರ್ ಬೆಲೆ 275 ರೂಪಾಯಿಗೆ ಏರಿಕೆ ಕಂಡಿದೆ. ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ 250 ರೂಪಾಯಿಯಾಗಿದೆ.

ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಆಹಾರ ಅಭದ್ರತೆ ತೋರಿರುವುದರಿಂದ ಸಕ್ಕರೆ, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ದಾಸ್ತಾನಿನ ವಿರುದ್ಧ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಇಂಧನ ಸಚಿವ ಉದಯ ಗಮನ್ ಪಿಲ ಇಂಧನವನ್ನು ಎಚ್ಚರಿಕೆಯಿಂದ ಬಳಸುವಂತೆ ನಾಗರಿಕರಿಗೆ ಮನವಿ ಮಾಡಿರೋದು ಗಮನಾರ್ಹವಾಗಿದೆ. ಇಂಧನ ಬಳಕೆ ಕಡಿಮೆಯಾಗದಿದ್ದಲ್ಲಿ ಈ ವರ್ಷಾಂತ್ಯದಲ್ಲಿ ಶ್ರೀಲಂಕಾ ಸರ್ಕಾರ ಇಂಧನ ಖರಿದೀಗೆ ರೇಷನ್ ವ್ಯವಸ್ಥೆ ಜಾರಿಗೆ ತರಲಿದೆ ಎನ್ನಲಾಗುತ್ತಿದೆ.


ಶ್ರೀಲಂಕಾ ಬಿಕ್ಕಟ್ಟಿಗೆ ಕಾರಣವೇನು?
ಟೂರಿಸಂ ಲಂಕಾದ ಆರ್ಥಿಕತೆಯ ಜೀವನಾಡಿ. ಕೋವಿಡ್‌ ಸಮಸ್ಯೆಯಿಂದ ಪ್ರವಾಸೋದ್ಯಮ ಮುಗ್ಗರಿಸಿದೆ. ಸರಕಾರದ ವೆಚ್ಚದಲ್ಲಿ ಏರಿಕೆಯಾಗಿದೆ. ತೆರಿಗೆ ಕಡಿತ ಉಪಕ್ರಮಗಳು , ಚೀನಾಕ್ಕೆ ಕೊಡಬೇಕಿರುವ ಭಾರಿ ಸಾಲದ ಹೊರೆ, ದಶಕದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ವಿದೇಶಿ ವಿನಿಮಯ ಸಂಗ್ರಹ. ಸಾಲ ತೀರಿಸಲು ಸರಕಾರ ನೋಟುಗಳನ್ನು ಹೆಚ್ಚು ಮುದ್ರಿಸಿದೆ. ಇದರಿಂದ ಬೆಲೆ ಏರಿಕೆಯಾಗಿದೆ. ಇವೆಲ್ಲದರ ಪರಿಣಾಮ ಶ್ರೀಲಂಕಾ ಜನತೆ ಈಗ ಭಾರತಕ್ಕೆ ಗುಳೆ ಹೊರಟ್ಟಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ :- ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ತಂದೆ ಮಗಳು ಸಾವು – ಸಚಿವ ಸೋಮಶೇಖರ್ ಗೆ ಸಾರ್ವಜನಿಕರು ಘೇರಾವ್ – ಸ್ಥಳದಿಂದ ಕಾಲ್ಕಿತ್ತ ಸಚಿವ..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!